ನವದೆಹಲಿ: ಸಮಾಜದ ಯಾವುದೇ ಕೆಡುಕುಗಳೊಂದಿಗೆ ಜಾತಿ ಮತ್ತು ರಾಜಕೀಯ – ಇವೆರಡೂ ಮಿಶ್ರಣವಾದರೆ ನ್ಯಾಯವು ಅಲ್ಲಿ ಸತ್ತೇ ಹೋಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ, ವಿರೋಧ ಪಕ್ಷಗಳ ರಾಜಕೀಯ ಅತ್ಯಾಚಾರ.
ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಅತ್ಯಾಚಾರವನ್ನು ಜಾತಿಗೆ ತಿರುಗಿಸಿ, ಅದನ್ನೇ ಅಲ್ಲಿ ಕ್ರಿಮಿನಲ್ಗಳನ್ನು ಬಗ್ಗು ಬಡಿಯುತ್ತಿರುವ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಅಪಖ್ಯಾತಿ ತರುವ ಅಸ್ತ್ರವನ್ನಾಗಿ ಬಳಸುತ್ತಿರುವ ಕಾಂಗ್ರೆಸ್ ಮತ್ತು ಅದರ ಅನುಯಾಯಿ ಮಾಧ್ಯಮಗಳ ಸಂಚು ಬಟಾ ಬಯಲಾಗಿದೆ.
ಇದರ ನಡುವೆ, ಮಾಧ್ಯಮದ ವಿಶ್ವಾಸಾರ್ಹತೆಯೂ ಕುಸಿದು ಹೋಗಿದ್ದು, ಇಂಡಿಯಾ ಟುಡೇ ಮತ್ತು ಆಜ್-ತಕ್ ಚಾನೆಲ್ಗಳು ದೇಶದಲ್ಲಿ ಅಸ್ಥಿರತೆ ಮೂಡಿಸುವ ಕಾಂಗ್ರೆಸ್ ಪ್ರಯತ್ನಕ್ಕೆ ಕೈಜೋಡಿಸಿದ ಗೌಪ್ಯ ಅಜೆಂಡಾ ಕೂಡ ಬಯಲಿಗೆ ಬಂದಿದೆ.
ಒಬ್ಬ ನಿಷ್ಪಾಪಿ ಹೆಣ್ಣು ಮಗಳಿಗಾದ ಅನ್ಯಾಯದ ಬಗ್ಗೆ ಎಲ್ಲರೂ ಒಂದಾಗಿ ಹೋರಾಡಬೇಕಾಗಿರುವ ಈ ಕಾಲದಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನೇ ಗುರಿಯಾಗಿರಿಸಿ, ರಾಜಕೀಯ ಪ್ರತಿಭಟನೆ ನಡೆಸುವುದು, ಪ್ರಚೋದಿಸುವುದು ಮುಂತಾದ ಕಾರ್ಯಕ್ಕೆ ಕೈಹಚ್ಚಿರುವ ಕಾಂಗ್ರೆಸ್, ತನ್ನ ಗತವೈಭವವನ್ನು ಮರಳಿ ಪಡೆಯಲು ಯತ್ನಿಸುತ್ತಿದೆ.
ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ತಾವು ಬಯಲಿಗೆಳೆದೆವು ಎಂದು ಬೊಂಬಡಾ ಬಜಾಯಿಸಿಕೊಂಡಿದ್ದ ಇಂಡಿಯಾ ಟುಡೇ ಚಾನೆಲ್ನ ಪತ್ರಕರ್ತೆ ತನುಶ್ರೀ ಪಾಂಡೆ, ಎಷ್ಟು ಕ್ಷಿಪ್ರವಾಗಿ ದಿಢೀರ್ ಸ್ಟಾರ್ ಆಗಿ ಮೂಡಿ ಬಂದರೋ, ಅಷ್ಟೇ ವೇಗದಲ್ಲಿ ಪ್ರಪಾತಕ್ಕೆ ಬಿದ್ದಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯ ಸಹೋದರನೊಂದಿಗೆ ಆಕೆ ನಡೆಸಿರುವ ಟೆಲಿಫೋನ್ ಸಂಭಾಷಣೆಯು ಸೋರಿಕೆಯಾಗಿದ್ದು, ಅದರಲ್ಲಿ ಸರ್ಕಾರದ ವಿರುದ್ಧ ಹೇಳಿಕೆ ನೀಡುವಂತೆಯೂ, ಈ ಕುರಿತು ವಿಡಿಯೊ ಮಾಡಿ ತನಗೆ ಕಳುಹಿಸುವಂತೆಯೂ ಆಕೆ ಒತ್ತಾಯಿಸುತ್ತಿರುವ ಅಂಶ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಟಾ ಬಯಲಾಗಿದೆ.
ತಂತ್ರಜ್ಞಾನ ಯುಗದಲ್ಲಿ ಈ ರೀತಿಯ ಆಡಿಯೋಗಳನ್ನು ದೃಢೀಕರಿಸುವುದು ಕಷ್ಟವೇ. ಆದರೆ, ಸ್ವತಃ ಇಂಡಿಯಾ ಟುಡೆ ಪತ್ರಕರ್ತರೇ ಇದನ್ನು ದೃಢಪಡಿಸಿರುವುದು, ಕಾಂಗ್ರೆಸ್ ಹಾಗೂ ಮಾಧ್ಯಮಗಳ ಭ್ರಷ್ಟ ನೆಕ್ಸಸ್ ಬಯಲಾಗಲು ಕಾರಣವಾಗಿದೆ.
ಉತ್ತರ ಪ್ರದೇಶ ಆಡಳಿತವು ತನ್ನ ಮೇಲೆ ಒತ್ತಡ ಹೇರುತ್ತಿದೆ ಅಂತ ನಿಮ್ಮ ಅಪ್ಪನಲ್ಲಿ ಹೇಳಿಸಿ ವಿಡಿಯೊ ಮಾಡಿ ಕಳುಹಿಸಿಕೊಡು ಅಂತ ಅತ್ಯಾಚಾರ ಸಂತ್ರಸ್ತೆಯ ಸಹೋದರ ಸಂದೀಪ್ನಲ್ಲಿ ಈ ಪತ್ರಕರ್ತೆ ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ಆಡಿಯೋ ತುಣುಕು ದೊರೆತಿರುವಂತೆಯೇ, ಇಂಡಿಯಾ ಟುಡೇ ಆತಂಕಕ್ಕೆ ಸಿಲುಕಿದೆ.
ಸಂಭಾಷಣೆ ಮತ್ತು ತನ್ನ ವರದಿಗಾರ್ತಿಯ ನಡುವಿನ ಸಂಭಾಷಣೆಯನ್ನು ಸಮರ್ಥಿಸಲು ಹೋಗಿ ಇಂಡಿಯಾ ಟುಡೆ ಕೃತ್ಯವನ್ನು ಒಪ್ಪಿಕೊಂಡಂತಾಗಿದೆ. ಟೆಲಿಫೋನ್ ಸಂಭಾಷಣೆಯ ಮಾತುಗಳು ಸೋರಿಕೆಯಾಗಿರುವುದು ಸರ್ಕಾರದ ಕುತಂತ್ರ ಎಂದು ಹೇಳಿರುವ ಇಂಡಿಯಾ ಟುಡೇ, ಫೋನ್ ಕದ್ದಾಲಿಕೆ ಬಗ್ಗೆ ಆಕ್ಷೇಪವೆತ್ತಿದೆ. ಈ ಕುರಿತು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ಕೂಡ, ಟೆಲಿಫೋನ್ ಸಂಭಾಷಣೆ ನಡೆದಿರುವುದನ್ನು ಖಚಿತಪಡಿಸಿದೆ.
ಈ ಮಧ್ಯೆ, ಕಾಂಗ್ರೆಸ್ ಅಧಿನಾಯಕಿಯಾಗಿ ಬಿಂಬಿತವಾಗುತ್ತಿರುವ ಪ್ರಿಯಾಂಕ ವಾದ್ರಾ ಕೂಡ, ಇಂಡಿಯಾ ಟುಡೇ ಮಾಡಿದ ಕೆಲಸವನ್ನು ಸಮರ್ಥಿಸಿಕೊಂಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಶುಕ್ರವಾರ ಈ ಆಡಿಯೋ ಕ್ಲಿಪ್ OpIndia ತಾಣದ ಮೂಲಕ ಹೊರಬಿದ್ದಿತ್ತು. ಅದರಲ್ಲಿ ಸಂತ್ರಸ್ತೆಯ ಸಹೋದರ ಸಂದೀಪ್ ಜೊತೆ ತನುಶ್ರೀ ಪಾಂಡೆ ಮಾತನಾಡುತ್ತಾ, ಸ್ಥಳೀಯ ಆಡಳಿತವು ಒತ್ತಡ ಹೇರುತ್ತಿದೆ ಎಂದು ತಂದೆಯಿಂದ ಹೇಳಿಕೆ ಕೊಡಿಸುವಂತೆ ಒತ್ತಾಯಿಸುತ್ತಿರುವುದು ಕೇಳಿಸುತ್ತಿತ್ತು. ಇಡೀ ಸಂಭಾಷಣೆಯಲ್ಲಿ ಆಕೆ ನಿರ್ದಿಷ್ಟ ಹೇಳಿಕೆಯನ್ನು ಕೊಡಿಸುವಂತೆ ಒತ್ತಡ ಹೇರುತ್ತಿದ್ದುದು ತಿಳಿಯುತ್ತಿತ್ತು.
ಪೂರ್ಣ ಆಡಿಯೋ ಸಂಭಾಷಣೆ ಇಲ್ಲಿದೆ ಮತ್ತು ಸ್ಪಷ್ಟವಾಗಿದೆ.
ಮತ್ತೊಂದು ಆಡಿಯೋ ಸಂಭಾಷಣೆಯಲ್ಲಿ, ಉತ್ತರ ಪ್ರದೇಶ ಸರ್ಕಾರ ಘೋಷಿಸಿದ 25 ಲಕ್ಷ ರೂ. ಪರಿಹಾರವನ್ನು ತೆಗೆದುಕೊಳ್ಳದಂತೆ ಸಂದೀಪ್ ಮೇಲೆ ಒತ್ತಡ ಹಾಕಲಾಗುತ್ತಿತ್ತು. ಬದಲಾಗಿ, ಕಾಂಗ್ರೆಸ್ ನೀಡುವ 50 ಲಕ್ಷ ರೂ. ಮೊತ್ತವನ್ನು ತೆಗೆದುಕೊಂಡು ಈ ವಿಷಯದ ‘ಫೈಸ್ಲಾ’ಕ್ಕೆ ಒಪ್ಪಬಾರದು ಎಂದು ಸೂಚಿಸಲಾಗುತ್ತದೆ.
ಅದರಲ್ಲಿ, ಯಾರಾದರೂ ಬಂದು ಎಲ್ಲಿಗಾದರೂ ಕರೆದುಕೊಂಡು ಹೋದರೆ, ಬರುವುದಿಲ್ಲ ಎನ್ನಬೇಕು. ಯಾಕಂದ್ರೆ ಶೀಘ್ರದಲ್ಲೇ ಪ್ರಿಯಾಂಕಾ ಗಾಂಧಿ ನಿಮ್ಮ ಮನೆಗೆ ಬರುತ್ತಾರೆ. ಎಲ್ಲಿಗೂ ಹೋಗಬೇಡಿ ಎಂದು ಹೇಳುವ ಧ್ವನಿ ಕೇಳಿಸುತ್ತದೆ.
ಇದರ ನಡುವೆ, ಆರೋಪಿಗಳಲ್ಲೊಬ್ಬನ ಪರವಾಗಿ ವರದಿ ಮಾಡಿರುವ ಇಂಡಿಯಾ ಟುಡೇಯ ಹಿಂದಿ ಚಾನೆಲ್ ಆಗಿರುವ ಆಜ್-ತಕ್, ಆರೋಪಿಯು ಅತ್ಯಾಚಾರ ನಡೆದ ದಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು, ಕಂಪನಿಯ ಹಿರಿಯ ಅಧಿಕಾರಿಯನ್ನು ಮಾತನಾಡಿಸಿ ವರದಿ ಮಾಡಿದೆ.
ಆರೋಪಿಗಳಲ್ಲೊಬ್ಬನಾದ ರಾಮು ಅಲಿಯಾಸ್ ರಾಮ್ ಕುಮಾರ್, ಫ್ಯಾಕ್ಟರಿಯಲ್ಲಿದ್ದುದನ್ನು ಆತನ 20-25 ಮಂದಿ ಸಹೋದ್ಯೋಗಿಗಳು ಖಚಿತಪಡಿಸಿದ್ದಾರೆ ಎಂದು ಆಜ್-ತಕ್ ವರದಿ ಮಾಡಿದೆ.
ಇಷ್ಟೆಲ್ಲ ಗದ್ದಲವಾಗುತ್ತಿದ್ದರೂ, ಪುನಃ ಹತ್ರಾಸ್ ಕುಟುಂಬವನ್ನು ಭೇಟಿ ಮಾಡಲು ಕಾಂಗ್ರೆಸ್ ಅಧಿನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಶನಿವಾರವೂ ಹೊರಟಿದ್ದು, ಅವರು ಕಾರಿನಲ್ಲಿ ನಗೆ ಚಟಾಕಿ ಹಾರಿಸುತ್ತಾ ಸಾಗುತ್ತಿರುವುದನ್ನು ಸ್ವತಃ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.
ಇದರ ನಡುವೆ, ಅತ್ಯಾಚಾರವಾಗಿದೆ ಎನ್ನಲಾಗುತ್ತಿರುವ ಯುವತಿಯ ಹತ್ಯೆ ನಡೆದಿದ್ದು ಕೌಟುಂಬಿಕ ಕಲಹದಿಂದಾಗಿ ಎಂಬ ಬಗ್ಗೆ ಅಲ್ಲಿನ ಸ್ಥಳೀಯರು ಖಡಾಖಂಡಿತವಾಗಿ ನುಡಿಯುತ್ತಿರುವ ವಿಡಿಯೊ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಆದಿನ ಏನಾಯಿತು ಅಂತ ತಾಯಿಯೇ ವಿವರಿಸುವ ವೀಡಿಯೊ ಕೂಡ ನೋಡಬಹುದು. ಸಾವಿಗೀಡಾದ ಪುತ್ರಿಯ ಮೃತದೇಹವಲ್ಲೇ ಇತ್ತು. ಯಾರಿಗೂ ತಿಳಿಸದೆ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು ಎಂಬ ಆರೋಪದ ಬಗ್ಗೆ ಜನರು ಇದೇ ವಿಡಿಯೊವನ್ನು ಶೇರ್ ಮಾಡಿ ನಿರಾಕರಿಸುತ್ತಿದ್ದಾರೆ.
ಬುದ್ಧಿವಂತರು, ಪ್ರಾಜ್ಞರು ಮತ್ತು ನಾಗರಿಕ ಜನರು HathrasTruthExposed ಹ್ಯಾಶ್ ಟ್ಯಾಗ್ ಮೂಲಕ ಎಲ್ಲ ಮಾಹಿತಿಯನ್ನು ಬಯಲು ಮಾಡಿದ್ದಾರೆ.
https://twitter.com/search?q=HathrasTruthExposed

Average Rating