Read Time:7 Minute, 4 Second

ಕೋವಿಡ್ ಸಂಕಷ್ಟದ ನಡುವೆ ರೈತರ ವೃಥಾ ಪ್ರತಿಭಟನೆಯಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತೇ? 70 ಸಾವಿರ ಕೋಟಿ!

0 0

ನವದೆಹಲಿ: ಜನರಿಗೆ ತಾವೇನು ಮಾಡುತ್ತಿದ್ದೇವೆ ಅಂತ ಗೊತ್ತಿರುವುದಿಲ್ಲ, ರಾಜಕೀಯ ಪಕ್ಷಗಳ ದಾಳವಾಗಿ ಏನೋ ಮಾಡಲು ಹೋಗಿ ಏನೋ ಆಗುತ್ತದೆ ಎಂಬುದಕ್ಕೆ ಸಾಕ್ಷಿ ಇಲ್ಲಿದೆ.

ಕೃಷಿಕರಿಗೆ ಹೆಚ್ಚು ಲಾಭ ಸಿಗಲಿ ಎಂಬ ಕಾರಣಕ್ಕಾಗಿ ಹೊಸ ಕೃಷಿ ನೀತಿಗಳನ್ನು 2020ರ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ತಾವು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ನರೇಂದ್ರ ಮೋದಿ ಜಾರಿಗೆ ತಂದರೆಂಬ ಏಕೈಕ ಕಾರಣಕ್ಕಾಗಿ, ಈ ಕಾಯ್ದೆಗಳ ಬಗ್ಗೆ ಇಲ್ಲದ ಪುಕಾರು ಹಬ್ಬಿಸಿದ ಕಾಂಗ್ರೆಸ್ ಹಾಗೂ ಇತರ ವಿರೋಧಿ ಪಕ್ಷಗಳು, ರೈತರನ್ನು ಪ್ರತಿಭಟಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

ಕೋವಿಡ್-19 ಹಾವಳಿಯಿಂದ ಮೊದಲೇ ಕಂಗೆಟ್ಟಿದ್ದ ದೇಶದ ಆರ್ಥಿಕತೆಗೆ ಇದರಿಂದ ಮತ್ತಷ್ಟು ದೊಡ್ಡ ಹೊಡೆದ ಬಿದ್ದಿದೆ. ರೈತರು ರೈಲು ತಡೆದು, ಸಂಚಾರಕ್ಕೆ ಅಡ್ಡಿ ಮಾಡಿ, ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿ, ಮೊಬೈಲ್ ಟವರ್‌ಗಳಿಗೆ ಹಾನಿಯೆಸಗುವುದೇ ಮುಂತಾದ ‘ಶಾಂತಿಯುತ’ ಪ್ರತಿಭಟನೆಯಿಂದ ಕೇವಲ ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ 70 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಪಿಹೆಚ್‌ಡಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಪಿಎಚ್‌ಡಿಸಿಸಿಐ) ವರದಿಯೊಂದು ತಿಳಿಸಿದೆ.

ಇದನ್ನೂ ಓದಿ: ಪ್ರತಿಭಟನೆ ಹೆಸರಲ್ಲಿ ದೇಶದ ಆಸ್ತಿಗೆ ಹಾನಿ | ಕರ್ತವ್ಯ ಮರೆಯಬೇಡಿ: ನರೇಂದ್ರ ಮೋದಿ

ಈ ಆಘಾತಕಾರಿ ಅಂಶವು ಇಡೀ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ನರೇಂದ್ರ ಮೋದಿ ಸರ್ಕಾರದ ಮೇಲೆ ವೃಥಾ ಹೊರೆಯೂ ಆಗಿದೆ.

ವಿಶೇಷವಾಗಿ ಪಂಜಾಬ್ ಮತ್ತು ಹರ್ಯಾಣ ಹಾಗೂ ನವದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಪ್ರತಿಭಟನೆ ಜೋರಾಗಿತ್ತು. ಆಹಾರ ಸಂಸ್ಕರಣೆ, ಹತ್ತಿ ಜವಳಿ ಉದ್ಯಮ, ವ್ಯಾಪಾರ-ವಹಿವಾಟು ಮಾತ್ರವಲ್ಲದೆ ಪ್ರವಾಸೋದ್ಯಮ ವಿಭಾಗವೂ ಈ ರೀತಿಯ ವೃಥಾ ಪ್ರತಿಭಟನೆಯಿಂದ ಹೊಡೆತ ಅನುಭವಿಸಿವೆ ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ರೈತರ 36 ದಿನಗಳ ಪ್ರತಿಭಟನೆಯಿಂದ 2020-21 ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಇದುವರೆಗೆ 70000 ಕೋಟಿ ರೂ. ನಷ್ಟವಾಗಿದೆ. ವಿತರಣಾ ಸರಣಿಯೇ ಕಡಿತವಾಗಿದ್ದು, ಪಂಜಾಬ್ ಮತ್ತು ಹರ್ಯಾಣ ಹಾಗೂ ನವದೆಹಲಿ ಸುತ್ತಮುತ್ತಲಿನ ಪ್ರಗತಿಪರ ಪ್ರದೇಶಗಳಲ್ಲಿನ ಆರ್ಥಿಕ ಚಟುವಟಿಕೆಗಳಿಗೆ ಭಾರಿ ಹೊಡೆತ ಬಿದ್ದಿದೆ ಎಂದು ಪಿಎಚ್‌ಡಿಸಿಸಿಐ ಅಧ್ಯಕ್ಷ ಸಂಜಯ್ ಅಗರ್‌ವಾಲ್ ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ಹೇಳಿದೆ.

ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿಸಿದ್ದ ತೆಲಂಗಾಣಕ್ಕೀಗ ಜ್ಞಾನೋದಯ: ರೈತರು ಯಾರಿಗೂ ಮಾರಬಹುದೆಂದ ಸಿಎಂ ಚಂದ್ರಶೇಖರ ರಾವ್

ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಸುಮಾರು 45 ಲಕ್ಷಕ್ಕೂ ಮಿಕ್ಕಿ ಕಾರ್ಮಿಕರಿರುವ 25 ಲಕ್ಷದಷ್ಟು ಮೈಕ್ರೋ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ (MSMEಗಳು). ಎರಡು ರಾಜ್ಯಗಳ ಒಟ್ಟಾರೆ ದೇಶೀ ಉತ್ಪನ್ನ (ಜಿಎಸ್‌ಡಿಪಿ) 14 ಲಕ್ಷ ಕೋಟಿ ರೂ. ಇದ್ದು, ಉಭಯ ರಾಜ್ಯಗಳ MSMEಗಳ ಪಾಲು ಸುಮಾರು 4 ಲಕ್ಷ ಕೋಟಿ ರೂ.

ಪ್ರತಿಭಟನೆಯಿಂದಾಗಿ ಆಹಾರ ಸಂಸ್ಕರಣೆ, ಹತ್ತಿ ಬಟ್ಟೆ, ಜವಳಿ, ಆಟೋಮೊಬೈಲ್, ಕೃಷಿ ಯಂತ್ರೋಪಕರಣ, ಮಾಹಿತಿ ಮತ್ತು ತಂತ್ರಜ್ಞಾನ, ವ್ಯಾಪಾರ, ಪ್ರವಾಸೋದ್ಯಮ, ಸಾರಿಗೆ ಮತ್ತು ಆತಿಥ್ಯ ಉದ್ಯಮಕ್ಕೆ ಹೊಡೆತ ಬಿದ್ದಿದೆ.

ಪ್ರತಿಭಟನೆಯಿಂದಾಗಿ ಕಚ್ಚಾವಸ್ತುಗಳ ಪೂರೈಕೆಗೆ ತೀವ್ರ ಅಡಚಣೆಯಾಗಿದೆ ಎಂದಿರುವ ಅಗರ್ವಾಲ್, ಪ್ರತಿಭಟನೆಕಾರರು ಹಾಗೂ ಸರ್ಕಾರದ ಮಧ್ಯೆ ಇರುವ ವೃಥಾ ಬಿಕ್ಕಟ್ಟು ಒಮ್ಮೆ ಪರಿಹಾರ ಕಂಡರೆ ಸಾಕು ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ರೈತರ ಪ್ರತಿಭಟನೆ ಹೆಸರಿನಲ್ಲಿ ರಸ್ತೆ ಸಂಚಾರ, ರೈಲು ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೂ ಸಾಕಷ್ಟು ತೊಂದರೆಯಾಗಿದೆ. ಬೇಡಿಕೆ ಈಡೇರಿಸದಿದ್ದರೆ ಮತ್ತಷ್ಟು ರಸ್ತೆ ತಡೆ ನಡೆಸುತ್ತೇವೆ ಅಂತ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಸರ್ಕಾರಕ್ಕೆ ಎಚ್ಚರಿಸುತ್ತಲೇ ಇದ್ದಾರೆ.

ಇದನ್ನೂ ಓದಿ: Farmer Protest: ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿರುವ ರಾಹುಲ್, ಕೇಜ್ರಿವಾಲ್: ಸಾಕ್ಷ್ಯಾಧಾರ ಸಮೇತ ನೈಜಮುಖ ಬಟಾಬಯಲು

ತಮಗೆ ಅನುಕೂಲ ಮಾಡುವ ಕಾಯ್ದೆಗಳ ವಿರುದ್ಧವೇ ಅವರು ಪ್ರತಿಭಟನೆ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಂದು ಈಗಾಗಲೇ ಬಹುತೇಕ ಪ್ರಜ್ಞಾವಂತ ಕೃಷಿಕರು, ತಜ್ಞರು, ಕೇಂದ್ರ ಸಚಿವರು ಹೇಳಿದ್ದಾರೆ.

ರೈತರ ಪ್ರತಿಭಟನೆಯಿಂದಾದ ಸಮಸ್ಯೆಗಳ ವಿರುದ್ಧ ಸುಪ್ರೀಂ ಕೋರ್ಟಿಗೂ ಮೊರೆ ಹೋದ ಸಂದರ್ಭದಲ್ಲಿ, ರಾಜಧಾನಿ ಸುತ್ತಮುತ್ತ ಆದ ರಸ್ತೆ ತಡೆ ಬಗ್ಗೆ ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬಡೆ ಅವರೂ ಆತಂಕ ವ್ಯಕ್ತಪಡಿಸಿದ್ದರು. ರಾಜಧಾನಿ ಜನರು ಆಹಾರವಿಲ್ಲದೆ ಹಸಿವಿನಲ್ಲಿರಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಅವರು, ಕೇವಲ ಪ್ರತಿಭಟನೆ ನಡೆಸುವುದರ ಬದಲು ಮಾತುಕತೆಯಾದರೆ ಪ್ರತಿಭಟನೆಯ ಉದ್ದೇಶ ಈಡೇರುತ್ತದೆ ಎಂದು ಸಲಹೆ ನೀಡಿದ್ದರು.

ಕೃಷಿ ಕಾಯ್ದೆಗಳ ಬಗ್ಗೆ ಅಪಪ್ರಚಾರ
ಕೃಷಿ ಕಾಯ್ದೆಗಳ ಬಗ್ಗೆ ಹಲವಾರು ಸ್ಥಾಪಿತ ಹಿತಾಸಕ್ತಿಗಳು, ರೈತರ ಪ್ರತಿಭಟನೆಯೊಂದಿಗೆ ಸೇರಿಕೊಂಡು, ಮೋದಿ ಸರ್ಕಾರವನ್ನು ಟಾರ್ಗೆಟ್ ಮಾಡುವ ಕಾರಣಕ್ಕಾಗಿ ಅಪಪ್ರಚಾರ ಆಂದೋಲನ ನಡೆಸುತ್ತಿವೆ. ಇದರಲ್ಲಿ ಪಂಜಾಬಿನ ಎಸ್ಎಫ್‌ಜೆ ಮುಂತಾದ ಪ್ರತ್ಯೇಕತಾವಾದಿ ಸಂಘಟನೆಗಳು, ಪಿಎಫ್ಐ ಕೂಡ ನುಸುಳಿಕೊಂಡು, ಮೋದಿ ವಿರುದ್ಧ ದ್ವೇಷ ಕಾರುವುದಕ್ಕಾಗಿ ಭಾರತ-ವಿರೋಧಿ ಅಜೆಂಡಾವನ್ನು ಹರಡಲು ರೈತರ ಪ್ರತಿಭಟನೆಯನ್ನು ಉಪಯೋಗಿಸುತ್ತಿವೆ ಎಂಬ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳು ಬಂದಿವೆ.

ಇದನ್ನೂ ಓದಿ: ಮೋದಿ ವಿರುದ್ಧದ ರೈತ ಹೋರಾಟ | ಕಿಸಾನ್ ಯೂನಿಯನ್‌ಗೆ ವಿದೇಶದಿಂದ ಅಕ್ರಮವಾಗಿ ಹರಿದುಬರುತ್ತಿದೆ ಲಕ್ಷ ಲಕ್ಷ ಹಣ!

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ನಮ್ಮ ಪ್ರಕೃತಿಯೇ ಒಪ್ಪದ ಜನವರಿ 01 ಹೊಸವರ್ಷ ಆಗುವುದೆಂತು?
Next post ದೇಶಭಕ್ತಿಯೇ ಹಿಂದುವಿನ ಮೂಲ ಗುಣ, ಆತನೆಂದಿಗೂ ಭಾರತ-ದ್ರೋಹಿಯಾಗಲಾರ: ಭಾಗವತ್, ಓವೈಸಿಗೆ ಉರಿ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ