Read Time:4 Minute, 37 Second

ಗಡಿ ಬಿಕ್ಕಟ್ಟು | ಚೀನಾ ಕಣ್ಣಿಗೆ ಮಣ್ಣೆರಚಿದ ಭಾರತೀಯ ಸೇನೆ: ಲಬೋ ಲಬೋ ಎನ್ನುತ್ತಿದೆ ಚೀನಾ!

0 0

ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ನಿಯೋಜಿಸಿದ್ದ ಕ್ಯಾಮೆರಾಗಳು, ಸರ್ವೇಕ್ಷಣಾ ಯಂತ್ರೋಪಕರಣಗಳ ‘ಕಣ್ಣಿಗೆ’ ಮಣ್ಣೆರಚಿದ ಭಾರತೀಯ ವೀರರ ಸೇನೆಯು, ಪಾಂಗಾಂಗ್ ಸರೋವರದ ದಕ್ಷಿಣ ತೀರದ ಸಮೀಪದ ಎತ್ತರದ ಭೂಭಾಗದಲ್ಲಿ ಬೀಡು ಬಿಟ್ಟಿದ್ದೊಂದು ಅಚ್ಚರಿಯ ಮತ್ತು ಸಾಹಸಮಯ ಕಥೆ.

ಈ ಎತ್ತರ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆಗಳ ಚಟುವಟಿಕೆಗಳನ್ನು ತಿಳಿಯಲೆಂದೇ ಧೂರ್ತ ಚೀನಾದ ಸೇನೆಯು ಕ್ಯಾಮೆರಾ ಮತ್ತಿತರ ಸರ್ವೇಕ್ಷಣಾ ಉಪಕರಣಗಳನ್ನು ಅಳವಡಿಸಿತ್ತು. ಆದರೂ, ಭಾರತೀಯ ಸೇನಾಪಡೆಗಳು ಸೋಮವಾರ ಇವುಗಳ ಕಣ್ತಪ್ಪಿಸಿ ಪರ್ವತದ ಮೇಲೇರಿ ತನ್ನ ನೆಲೆ ಸ್ಥಾಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿತದ್ದವು.

ಸರೋವರದ ಉತ್ತರ ಭಾಗದಲ್ಲೇ ನೆಲೆಯಾಗಿದ್ದ ಚೀನಾ ಪಡೆಗಳ ಚಲನವಲನ ದಕ್ಷಿಣ ಭಾಗದಲ್ಲಿಯೂ ಕಂಡುಬಂದಾಗ ಭಾರತೀಯ ಪಡೆಗಳು ಕ್ಷಿಪ್ರವಾಗಿ ಎಚ್ಚೆತ್ತುಕೊಂಡವು.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .

ವಾಸ್ತವ ಗಡಿ ನಿಯಂತ್ರಣ ರೇಖೆಯ (LAC) ಗುಂಟ ಇರುವ, ಯಾವುದೇ ದೇಶಕ್ಕೂ ಸೇರದ ಭೂಭಾಗ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಪಡೆಗಳ ನಡುವೆ ಸಂಘರ್ಷ ಏರ್ಪಡುತ್ತಲೇ ಇದೆ.

ದಕ್ಷಿಣದ ದಂಡೆಯಲ್ಲಿ ಸೋಮವಾರ ಹೊಸದಾಗಿ ಚೀನಾ-ಭಾರತ ಯೋಧರ ನಡುವೆ ಸಂಘರ್ಷ ನಡೆದಿತ್ತು.

ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ಶಮನಕ್ಕೆ ಸೋಮವಾರ ಎರಡೂ ಕಡೆಯ ಬ್ರಿಗೇಡ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿತ್ತು.

ಭಾರತೀಯ ಚಲನವಲನಗಳ ಪತ್ತೆಗಾಗಿಯೇ ವಾಸ್ತವ ಗಡಿ ನಿಯಂತ್ರಣ ರೇಖೆಯಗುಂಟ ಅಳವಡಿಸಲಾಗಿದ್ದ ಚೀನಾ ಕ್ಯಾಮೆರಾಗಳ ಕಣ್ತಪ್ಪಿಸಿದ್ದೇ ಭಾರತೀಯ ಯೋಧರ ಚಾಣಾಕ್ಷ ನಡೆ. ಇದೀಗ, ಭಾರತವು ತಮ್ಮ ಗಡಿಯ ವ್ಯಾಪ್ತಿಯಲ್ಲೇ ಈ ಪರ್ವತೀಯ ಭಾಗವನ್ನು ಸೇರಿಕೊಂಡ ತಕ್ಷಣವೇ ಅವುಗಳನ್ನೆಲ್ಲಾ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪರ್ವತ ಪ್ರದೇಶ ತಮಗೇ ಸೇರಿದ್ದು ಎಂದು ವಾದಿಸುತ್ತಲೇ ಬಂದಿದ್ದ ಚೀನಾ, ಪಾಂಗಾಂಗ್ ಸರೋವರದ ದಕ್ಷಿಣ ಭಾಗ ಮತ್ತು ಸ್ಪಾಂಗೂರ್ ಗ್ಯಾಪ್ ಪ್ರದೇಶದಲ್ಲಿ, ಇದನ್ನು ಆಕ್ರಮಿಸಿಕೊಂಡು ಅನುಕೂಲಕರ ನೆಲೆ ಸ್ಥಾಪಿಸಿಕೊಳ್ಳಲು ಹೊಂಚು ಹಾಕುತ್ತಲೇ ಇತ್ತು.

ಇದೀಗ ಈ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ಇರುವುದರಿಂದ, ಭಾರತೀಯ ಸೇನೆಯು ಸೂಕ್ತ ಪಡೆಗಳನ್ನು ನಿಯೋಜಿಸಿ ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ಬಿಎಂಪಿ ಇನ್ಫೆಂಟ್ರಿ ಸಮರ ವಾಹನಗಳು, ಶಸ್ತ್ರಾಸ್ತ್ರಗಳೊಂದಿಗೆ ವಿಭಿನ್ನ ರೀತಿಯ ಯುದ್ಧಟ್ಯಾಂಕುಗಳನ್ನು ಕೂಡ ಅಲ್ಲಿ ನಿಯೋಜಿಸಲಾಗಿದೆ.

ಯಾವುದೇ ದುಸ್ಸಾಹಸಕ್ಕೆ ಸಮರ್ಥವಾಗಿ ಸ್ಪಂದಿಸಲು ಭಾರತೀಯ ಸೇನೆ ಎಲ್ಲ ರೀತಿಯ ನಿಯೋಜನೆಗಳನ್ನೂ ಮಾಡಿಕೊಂಡಿದೆ. ಈ ಬೆಟ್ಟವೇರಿ ನೆಲೆ ಸ್ಥಾಪಿಸಿಕೊಳ್ಳುವ ಚೀನಾದ ಸಂಚನ್ನರಿತ ಭಾರತೀಯ ಸೇನೆ, ಆಗಸ್ಟ್ 29-30ರ ಮಧ್ಯರಾತ್ರಿಯೇ ಅಲ್ಲಿ ನೆಲೆ ಸ್ಥಾಪಿಸಿಕೊಂಡಿತ್ತು.

ಮೂರು ತಿಂಗಳ ಹಿಂದೆ ಚೀನಾ ಪಡೆಗಳು ಲಡಾಖ್ ಸೆಕ್ಟರ್‌ನ ಫಿಂಗರ್ ಪ್ರದೇಶ ಮತ್ತಿತರ ಭಾಗಗಳಲ್ಲಿ ಭಾರತೀಯರು ಇದ್ದ ಸ್ಥಳದತ್ತ ಬಂದು, ಉಭಯ ದೇಶಗಳಿಗೂ ಸೇರದೇ ಇದ್ದ ನಡುವಿನ ಕಣಿವೆ ಪ್ರದೇಶದಲ್ಲಿ ಸಂಘರ್ಷ ನಡೆದಿತ್ತು.

ಇದೀಗ, ಭಾರತವು ಅಲ್ಲಿ ಮೇಲುಗೈ ಸಾಧಿಸಿರುವುದರ ಬಗ್ಗೆ ಕೈಕೈಹಿಸುಕಿಕೊಂಡಿರುವ ಚೀನಾ, ಭಾರತವೇ ಎಲ್ಲ ನೀತಿ ನಿಯಮಗಳನ್ನು ಹಾಗೂ ಚೀನಾದ ಗಡಿ ಸಾರ್ವಭೌಮತೆಯನ್ನು ಗಂಭೀರವಾಗಿ ಉಲ್ಲಂಘಿಸಿದೆ ಎಂದು ಬೊಬ್ಬಿಡತೊಡಗಿದೆ.

ಭಾರತವು ಪಾಂಗಾಂಗ್ ತ್ಸೊ ದಕ್ಷಿಣ ದಂಡೆ ಮತ್ತು ಸಮೀಪದ ರೆಜಿನ್ ಪಾಸ್‌ನ ಗಡಿಯ ಪಶ್ಚಿಮ ಭಾಗದಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ಅಕ್ರಮವಾಗಿ ದಾಟಿ ಬಂದಿದೆ ಮತ್ತು ಪ್ರಚೋದನೆ ನೀಡಿದೆ ಎಂದು ಚೀನಾ ಬಾಯಿಬಡಿದುಕೊಂಡಿದೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ನ್ಯಾಯಾಂಗ ನಿಂದನೆ: ಕೊನೆಗೂ 1 ರೂ. ದಂಡ ಕಟ್ಟಿದ ಪ್ರಶಾಂತ್ ಭೂಷಣ್
Next post ಸ್ಯಾನಿಟೈಸರ್ ಹೆಸರಿನಲ್ಲಿ ಮಹಾ ಮೋಸ ಆಗ್ತಿದೆ, ಎಚ್ಚರ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ