Modi US Visit | ಭಾರತ, ಮೋದಿಯನ್ನು ಹಾಡಿಹೊಗಳಿದ ಅಮೆರಿಕ: ದೇಶ ವಿರೋಧಿಗಳಿಗೆ ಶಾಕ್
Read Time:4 Minute, 58 Second

Modi US Visit | ಭಾರತ, ಮೋದಿಯನ್ನು ಹಾಡಿಹೊಗಳಿದ ಅಮೆರಿಕ: ದೇಶ ವಿರೋಧಿಗಳಿಗೆ ಶಾಕ್

0 0

Modi US Visit | ಹೊಸದಿಲ್ಲಿ: ಜಗತ್ತೇ ಭಾರತವನ್ನು, ನರೇಂದ್ರ ಮೋದಿ ನಾಯಕತ್ವವನ್ನು ಕೊಂಡಾಡುತ್ತಿದ್ದರೆ, ದೇಶದೊಳಗಿನ ಕೆಲವು ಶಕ್ತಿಗಳು ಹಾಗೂ ಹೊರಗಿನ ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ಭಾರತದ ಹೆಸರಿಗೆ, ನರೇಂದ್ರ ಮೋದಿ ಹೆಸರಿಗೆ ಕಳಂಕ ತರಲು ಶತಾಯಗತಾಯ ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿದೇಶದಲ್ಲಿ ಹೋಗಿ ಭಾರತದ ಸ್ಥಿತಿಗತಿಯನ್ನು, ಮೋದಿಯನ್ನು ಹಳಿಯುತ್ತಿರುವ ಸಂದರ್ಭದಲ್ಲಿಯೇ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುತ್ತಿರುವ ಅಮೆರಿಕ ಈಗ ನರೇಂದ್ರ ಮೋದಿಯನ್ನು, ಭಾರತದ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಇನ್ನಿಲ್ಲದಂತೆ ಹೊಗಳಿರುವುದು ದೇಶದೊಳಗಿದ್ದುಕೊಂಡೇ ದೇಶದ ಬಗ್ಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿರುವವರಿಗೆ ಬಲವಾದ ಏಟು ಕೊಟ್ಟಂತಾಗಿದೆ.

ಈ ತಿಂಗಳಾಂತ್ಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಸಂದರ್ಶಿಸುತ್ತಿದ್ದು, ಇದೀಗ ಶ್ವೇತ ಭವನವು ಭಾರತದ ಅತ್ಯಂತ ಸದೃಢ ಮತ್ತು ಸಕ್ರಿಯ ಪ್ರಜಾಪ್ರಭುತ್ವವನ್ನು ಯದ್ವಾತದ್ವ ಹೊಗಳಿದೆ.

ದೇಶದ ಮಾನ ಕಳೆಯುವ ಜಾಗತಿಕ ಪಿತೂರಿಗೆ ಕೈಜೋಡಿಸುವವರಿಗಿದು ಮುಟ್ಟಿನೋಡಿಕೊಳ್ಳುವ ಹೊಡೆತ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಾಗತಿಕ ಪಿತೂರಿಯ ಭಾಗವಾಗಿ ಎರಡ್ಮೂರು ತಿಂಗಳ ಹಿಂದೆ, ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ (ಸ್ಟೇಟ್ ಡಿಪಾರ್ಟ್‌ಮೆಂಟ್) ಕಳವಳ ವ್ಯಕ್ತಪಡಿಸಿದ ಹೇಳಿಕೆ ಹೊರಬಿದ್ದಾಗ, ದೇಶದೊಳಗಿದ್ದ ದೇಶವಿರೋಧಿಗಳು ಸಂಭ್ರಮಿಸಿದ್ದರು ಮತ್ತು ಇದು ಮೋದಿ ಆಡಳಿತಕ್ಕೆ ಸಿಕ್ಕ ತಪರಾಕಿ ಎಂದೇ ಬಂಬಡಾ ಬಜಾಯಿಸಿದ್ದರು. ಆದರೆ, ಅಮೆರಿಕ ಈಗ ನೀಡಿದ ಹೇಳಿಕೆಯಿಂದ ಅವರಿಗೆ ಆಘಾತವಾಗಿದೆ.

ಅಮೆರಿಕ ಹೇಳಿದ್ದೇನು?
“ಭಾರತವೊಂದು ಶಕ್ತಿ-ಉತ್ಸಾಹಗಳಿಂದ ತುಡಿಯುತ್ತಿರುವ ಪ್ರಜಾಪ್ರಭುತ್ವ. ಭಾರತಕ್ಕೆ ಹೋಗುವ ಯಾರೇ ಆದರೂ ಇದನ್ನು ನೇರವಾಗಿ ಅನುಭವಿಸಬಹುದು. ಅಲ್ಲಿನ ಪ್ರಜಾಸತ್ತಾತ್ಮಕ ಸಂಸ್ಥೆಗಳ ಸಾಮರ್ಥ್ಯ ಮತ್ತು ಆರೋಗ್ಯದ ಕುರಿತಾಗಿ ಮತ್ತಷ್ಟು ತಿಳಿದುಕೊಳ್ಳಲು ಬಯಸುತ್ತೇನೆ” ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಅವರು ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದರು.

ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಸರಕಾರ ಅಥವಾ ಅದರ ಏಜೆಂಟರಿಂದ ಅಕ್ರಮ ಮತ್ತು ಕಾನೂನನ್ನು ಕೈಗೆತ್ತಿಕೊಂಡು ನಡೆಯುತ್ತಿರುವ ಕೊಲೆಗಳು ನಡೆಯುತ್ತಿವೆ, ಅಕ್ರಮ ಬಂಧನಗಳಾಗುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ, ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ, ಪತ್ರಕರ್ತರಿಗೆ ಬೆದರಿಗೆ, ಬಂಧನ, ಹಿಂಸೆ; ಅಲ್ಪಸಂಖ್ಯಾತರ ಮೇಲೆ ಧರ್ಮ, ಸಾಮಾಜಿಕ ಸ್ಥಾನಮಾನ ಆಧಾರದಲ್ಲಿ ಹಿಂಸೆ ನೀಡಲಾಗುತ್ತಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯು ಮಾರ್ಚ್ ತಿಂಗಳಲ್ಲಿ ವಿದೇಶೀ ಮಾಧ್ಯಮಗಳ ಕುತ್ಸಿತ ವರದಿಗಳ ಆಧಾರದಲ್ಲಿ ಆರೋಪಿಸಿತ್ತು.

ಇದೀಗ ಅಮೆರಿಕವು ತನ್ನ ತಪ್ಪು ತಿದ್ದಿಕೊಂಡಿದೆ. ಭಾರತವು ನಮ್ಮ ಶಕ್ತಿಶಾಲಿ ಪಾಲುದಾರ ರಾಷ್ಟ್ರ. ಮೋದಿ ಅಮೆರಿಕಕ್ಕೆ ಬರುವಾಗ ಫೈಟರ್ ಜೆಟ್ ವಿಮಾನಗಳನ್ನು ಜಂಟಿಯಾಗಿ ಉತ್ಪಾದಿಸುವುದರ ಕುರಿತಾಗಿಯೂ ಮಾತನಾಡುತ್ತೇವೆ. ಇದು ಭಾರತದ ಸ್ವದೇಶೀ ತೇಜಸ್ ಯುದ್ಧ ವಿಮಾನದ ಉತ್ಪಾದನೆಗೆ ಉತ್ತೇಜನ ನೀಡಲಿದೆ ಎಂದಿದೆ ಶ್ವೇತಭವನ.

ಭಾರತದೊಳಗಿನ ಮತ್ತು ಹೊರಗಿನ ಶತ್ರುಗಳ ಏಕಪ್ರಕಾರವಾದ ಸುಳ್ಳು ಪ್ರಚಾರದ ಫಲವಾಗಿ ಇದೇ ಅಮೆರಿಕವು ಇದೇ ನರೇಂದ್ರ ಮೋದಿಗೆ ಅಮೆರಿಕ ಭೇಟಿಗಾಗಿ ವೀಸಾ ನೀಡದಿದ್ದುದು ಇತಿಹಾಸ. ಈಗ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಎತ್ತರಕ್ಕೇರಿಸಿದ್ದಾರೆ ಜೊತೆಗೆ, ತಮ್ಮ ನಿಸ್ವಾರ್ಥ ಕಾರ್ಯಗಳಿಂದ ತಮ್ಮ ಸ್ಥಾನಮಾನವನ್ನೂ ಹೆಚ್ಚಿಸಿಕೊಂಡು, ತಾವೊಬ್ಬ ಪ್ರಬಲ ನಾಯಕನೆಂಬುದನ್ನು ಶ್ರುತಪಡಿಸಿಕೊಂಡಿದ್ದಾರೆ. ಹೀಗಾಗಿ ಇದೇ ಅಮೆರಿಕವು ಮೋದಿ ಅವರನ್ನು ತಾವಾಗಿಯೇ ಆಹ್ವಾನಿಸುತ್ತಿರುವುದು ಬದಲಾದ ಇತಿಹಾಸಕ್ಕೆ ಸಾಕ್ಷಿ.

Avatar for Web Desk

About Post Author

Web Desk

Kannada News Enthusiasts | Professional Journalists | ಕನ್ನಡದ ಸುದ್ದಿ ಜೀವಿಗಳು
Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Sengol ಅಥವಾ ರಾಜದಂಡದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ನೋಡಿ
Next post 1700 ಕೋಟಿಯ ಬಿಹಾರ ಸೇತುವೆ ಬಿದ್ದಿದ್ದು 2ನೇ ಬಾರಿ: ಇಲ್ಲಿದೆ Bihar Bridge Collapse ಸರಣಿಯ ಮಾಹಿತಿ

ಸುದ್ದಿ ಸಂಚಯ

ಇವುಗಳನ್ನೂ ನೋಡಿ