Read Time:3 Minute, 29 Second

Covid-19 ಪ್ರಸರಣ ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣ

0 0

ಭೋಪಾಲ: ಚೀನಾ ವೈರಸ್‌ನಿಂದ ಹುಟ್ಟಿಕೊಂಡ ಕೋವಿಡ್-19 ಭಾರತಕ್ಕೆ ವಕ್ಕರಿಸಿದಾಗಿನಿಂದ ಕೇಂದ್ರ, ರಾಜ್ಯ ಸರ್ಕಾರಗಳು ಲಾಕ್‌ಡೌನ್, ಸೀಲ್‌ಡೌನ್ ಮುಂತಾದ ಕ್ರಮಗಳ ಮೂಲಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೂ, ಈ ಮಹಾಮಾರಿ ಈ ಪರಿಯಾಗಿ ಹರಡುವುದಕ್ಕೆ ಕಾರಣವೇನು? ಬೇರೇನಲ್ಲ, ಜನರ ನಿರ್ಲಕ್ಷ್ಯ ಮನೋಭಾವ.

ನನಗೆ ಕೋವಿಡ್ ಬರುವುದಿಲ್ಲ ಅಥವಾ ಬಂದರೂ ಊರಿಡೀ ಓಡಾಡುತ್ತೇನೆ ಎಂಬ ನಿಷ್ಕಾಳಜಿ ಮನೋಭಾವವೇ ಕೋವಿಡ್ ಈ ಪರಿ ಕಾಣಿಸಿಕೊಳ್ಳಲು ಕಾರಣ ಎಂಬುದು ಜನಸಾಮಾನ್ಯರಿಗೆ ತಿಳಿದ ವಿಷಯ. ಆದರೆ, ಈಗ ತಜ್ಞರು ಕೂಡ ಇದೇ ವಿಷಯವನ್ನು ದೃಢಪಡಿಸಿದ್ದಾರೆ.

ಕೋವಿಡ್ ವಕ್ಕರಿಸಿದಾಗ, ಅಷ್ಟು ಬೇಗ ಲಾಕ್‌ಡೌನ್ ಘೋಷಣೆ ಮಾಡಿದ್ದೇಕೆ ಎಂದು ಕೇಳಿದ್ದ ವಿರೋಧ ಪಕ್ಷಗಳು, ಈಗ ಇಷ್ಟು ಬೇಗ ಲಾಕ್‌ಡೌನ್ ತೆರವುಗೊಳಿಸುತ್ತಿರುವುದೇಕೆ ಎಂದು ಪ್ರಶ್ನಿಸಿವೆ. ಇದರ ಮಧ್ಯೆ, ಭಾರತದಲ್ಲಿ ಕೋವಿಡ್ ಯದ್ವಾತದ್ವಾ ಹರಡಿದೆ, ಇದಕ್ಕೆಲ್ಲ ನರೇಂದ್ರ ಮೋದಿಯೇ ಕಾರಣ ಎಂಬಂತೆಯೂ ದೂಷಿಸಲಾಗುತ್ತಿದೆ.

ಇದೀಗ, ಲಾಕ್‌ಡೌನ್ 4.0 ಮಾರ್ಗಸೂಚಿ ಬಿಡುಗಡೆಯಾಗಿದ್ದು, ಸೆ.21ರ ಬಳಿಕ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ 100ರಷ್ಟು ಜನ ಭಾಗವಹಿಸುವುದಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy.

ಈ ನಡುವೆ, ಮದ್ಯ ವಿತರಣೆ, ವಹಿವಾಟಿಗೆ ಮುಕ್ತ ಅವಕಾಶ ನೀಡಲಾಗಿದೆ, ಆದರೆ ಶಾಲೆಗಳನ್ನು ತೆರೆಯಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಕುಹಕವೂ ಕೇಳಿಬರಲು ಸರ್ಕಾರಗಳು ಕೈಗೊಂಡಿರುವ ನಿರ್ಧಾರವೇ ಕಾರಣ.

ಅಂತರ ಕಾಯ್ದುಕೊಳ್ಳುವುದು, ಕೈತೊಳೆದುಕೊಳ್ಳುವುದು, ಶೀತ-ಜ್ವರ ಲಕ್ಷಣಗಳಿದ್ದರೆ ಮನೆಯಲ್ಲೇ ಇರುವುದೇ ಮುಂತಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರ ನಡುವೆ, ನಿರ್ಬಂಧಗಳನ್ನೂ ಸಡಿಲಿಸಲಾಗುತ್ತಿರುವುದು ಕೋವಿಡ್-19 ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಭೋಪಾಲ ಘಟಕದ ನಿರ್ದೇಶಕ ಪ್ರೊ.ಸರ್ಮಾನ್ ಸಿಂಗ್ ದೃಢಪಡಿಸಿದ್ದಾರೆ.

ಈಗಾಗಲೇ ಇರುವ ನಿರ್ಬಂಧಗಳನ್ನು ನಿರ್ಲಕ್ಷಿಸಿ ಜನರು ಹೆಚ್ಚು ಸಂಖ್ಯೆಯಲ್ಲಿ ಒಂದೆಡೆ ಸೇರುತ್ತಿದ್ದಾರೆ. ಆದರೆ, ರಾಜಕೀಯ ಅಥವಾ ಸಾಮಾಜಿಕ ಕಾರ್ಯಕ್ರಮಗಳಿಲ್ಲದೆಯೂ ಜೀವನ ನಡೆಯುತ್ತದೆ. ಜೀವನಕ್ಕೆ ಅಗತ್ಯವಿರುವ ರೀತಿಯಲ್ಲಿ ಕಚೇರಿಗಳು ಮತ್ತು ಆರ್ಥಿಕ ಚಟುವಟಿಕೆಗಳು ಮಾತ್ರವೇ ತೆರೆಯಲಿ ಎಂದಿರುವ ಅವರು, ಆದರೆ, ನಿರ್ಬಂಧಗಳ ಸಡಿಲಿಕೆ ಮಾಡಿದ್ದೇಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Congress Letter Bomb: ಕಾಂಗ್ರೆಸ್‌ಗೆ ಪತ್ರ ಬರೆದ 23 ನಾಯಕರು ಯಾರು? ಅಂಥದ್ದೇನಿತ್ತು?: ಇಲ್ಲಿದೆ ಡೀಟೇಲ್ಸ್
Next post ಭಾರತದ ನಿಜವಾದ ‘ರತ್ನ’ ಪ್ರಣಬ್ ಮುಖರ್ಜಿ (85) ಇನ್ನಿಲ್ಲ

ಸುದ್ದಿ ಸಂಚಯ

ಇವುಗಳನ್ನೂ ನೋಡಿ