Read Time:2 Minute, 57 Second

ದೇಶಭಕ್ತಿಯೇ ಹಿಂದುವಿನ ಮೂಲ ಗುಣ, ಆತನೆಂದಿಗೂ ಭಾರತ-ದ್ರೋಹಿಯಾಗಲಾರ: ಭಾಗವತ್, ಓವೈಸಿಗೆ ಉರಿ!

0 0

ನವದೆಹಲಿ: ದೇಶಭಕ್ತಿ ಎಂಬುದು ಹಿಂದೂಗಳ ಅಂತಃಸತ್ವ, ಅವರ ಮೂಲಗುಣ, ಸ್ವಭಾವ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆದರೆ, ಇದು ಮುಸ್ಲಿಂ ವೋಟ್ ಬ್ಯಾಂಕ್ ಮೂಲಕವೇ ‘ಜಾತ್ಯತೀತ’ ರಾಜಕಾರಣ ಮಾಡುತ್ತಾ ಬಂದಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಹಿಡಿಸಿಲ್ಲ.

Making of Hindu Patriot: Background of Gandhiji’s Hind Swaraj ಎಂಬ ಕೃತಿ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದ ಭಾಗವತ್ ಅವರು, ಮಹಾತ್ಮ ಗಾಂಧಿಯನ್ನು ಉಲ್ಲೇಖಿಸಿ, ‘ಹಿಂದುಗಳೆಂದಿಗೂ ಭಾರತವಿರೋಧಿಗಳಾಗುವುದು ಸಾಧ್ಯವಿಲ್ಲ.’ ಎಂದಿದ್ದರು. ಧರ್ಮದಿಂದಲೇ ತನ್ನಲ್ಲಿ ದೇಶಭಕ್ತಿ ಹುಟ್ಟಿದೆ ಎಂಬ ಗಾಂಧೀಜಿ ಹೇಳಿಕೆಯನ್ನು ಅವರು ಉದ್ಧರಿಸಿದ್ದರು.

‘ಧರ್ಮ ಎಂದರೆ ಕೇವಲ ಧರ್ಮವಲ್ಲ. ಅದು ಧರ್ಮಕ್ಕಿಂತಲೂ ವಿಸ್ತಾರವಾದುದು’ ಎಂದಿದ್ದರು ಭಾಗವತ್.

ಯಾರಾದರೂ ಹಿಂದೂ ಆಗಿದ್ದರೆ ಆತ ದೇಶಭಕ್ತನೇ ಆಗಿರಬೇಕು. ಅದು ಆತ ಅಥವಾ ಆಕೆಯ ಮೂಲ ಗುಣ ಮತ್ತು ಸ್ವಭಾವ. ಕೆಲವೊಮ್ಮೆ ಅವರೊಳಗಿನ ದೇಶಭಕ್ತಿಯನ್ನು ಜಾಗೃತಗೊಳಿಸಬೇಕಾಗುತ್ತದೆ. ಆದರೆ ಹಿಂದು ಎಂದಿಗೂ ಭಾರತ-ವಿರೋಧಿಯಾಗಲಾರ. ಯಾವಾತ ದೇಶವನ್ನು ಪ್ರೀತಿಸುತ್ತಿದ್ದಾನೆ ಎಂದರೆ, ಅದು ನಾಡಿನ ಮಣ್ಣನ್ನಷ್ಟೇ ಅಲ್ಲ, ಅದರ ಜನರು, ನದಿ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಎಲ್ಲವನ್ನೂ ಪ್ರೀತಿಸುವಂತೆ ಎಂದು ಭಾಗವತ್ ವಿವರಣೆ ನೀಡಿದ್ದಾರೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

ಆದರೆ, ಓವೈಸಿಗೆ ಈ ಹೇಳಿಕೆ ಉರಿ ತಂದೊಡ್ಡಿದೆ.

ಆರೆಸ್ಸೆಸ್ ಮುಖ್ಯಸ್ಥರ ಹೇಳಿಕೆಯಿಂದ ತೀವ್ರ ಕಸಿವಿಸಿ ಅನುಭವಿಸಿರುವ ಓವೈಸಿ, ಹಿಂದೂಗಳ ಮೂಲಗುಣವೇ ರಾಷ್ಟ್ರಭಕ್ತಿ ಎಂಬ ಹೇಳಿಕೆಯು ಗಾಂಧಿ ಹಂತಕ ಗೋಡ್ಸೆಗೂ ಅನ್ವಯಿಸುತ್ತದೆಯೇ ಎಂದು ವ್ಯಂಗ್ಯವಾಡಿದ್ದಾರೆ.

ನೆಲ್ಲಿ ಹತ್ಯಾಕಾಂಡ, 1984ರ ಸಿಖ್-ವಿರೋಧಿ ಹತ್ಯಾಕಾಂಡ ಹಾಗೂ 2002ರ ಗುಜರಾತ್ ಗಲಭೆಗಳನ್ನು ಉಲ್ಲೇಖಿಸಿದ ಓವೈಸಿ, ಅವರೆಲ್ಲರೂ ಹಿಂದುಗಳೆಂಬ ಕಾರಣಕ್ಕೆ ದೇಶಭಕ್ತರು ಎನ್ನಬಹುದೇ ಅಂತ ಕಟಕಿಯಾಡಿದ್ದಾರೆ.

ಅಷ್ಟೇ ಅಲ್ಲದೆ, ಹೆಚ್ಚಿನ ಭಾರತೀಯರು ಅವರ ನಂಬಿಕೆಗಳನ್ನು ಲಕ್ಷ್ಯವಿಲ್ಲದೆಯೂ ದೇಶಭಕ್ತರಾಗಿರುತ್ತಾರೆ. ಭಾಗವತ್ ಹೇಳಿಕೆಯು ಆರೆಸ್ಸೆಸ್‌ನ ನಿರ್ಲಕ್ಷಿತ ಸಿದ್ಧಾಂತ ಅಂತಲೂ ದೂಷಿಸಿದ್ದಾರೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಕೋವಿಡ್ ಸಂಕಷ್ಟದ ನಡುವೆ ರೈತರ ವೃಥಾ ಪ್ರತಿಭಟನೆಯಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತೇ? 70 ಸಾವಿರ ಕೋಟಿ!
Next post ಕೊರೊನಾವೇ ಇಲ್ಲ, ‘ಬಿಜೆಪಿ ಲಸಿಕೆ’ ಬೇಡ ಎಂದ ಅಖಿಲೇಶ್ ಮಾತಿಗೆ ಇಂಟರ್ನೆಟ್‌ನಲ್ಲಿ ನಗೆ ಸ್ಫೋಟ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ