ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ ಎಂದಿರುವ ಗೂಗಲ್, ಇದೀಗ ಜೂಜಾಟಕ್ಕೆ ಪ್ರೋತ್ಸಾಹ ನೀಡಿದ ಆರೋಪದಲ್ಲಿ ಜನಪ್ರಿಯ ಹಣಕಾಸು ವ್ಯವಹಾರದ ಆ್ಯಪ್ ಪೇಟಿಎಂ ಅನ್ನು ತನ್ನ ಪ್ಲೇ ಸ್ಟೋರ್ನಿಂದ ತೆಗೆದುಹಾಕಿದೆ.
ಶುಕ್ರವಾರ ಈ ಕುರಿತು ತನ್ನ ಬ್ಲಾಗ್ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಗೂಗಲ್, ಪೇಟಿಎಂ ಇತ್ತೀಚೆಗೆ ಫ್ಯಾಂಟಸಿ ಕ್ರಿಕೆಟ್ ಟೂರ್ನಮೆಂಟ್ ಅನ್ನು ಸೇರ್ಪಡೆಗೊಳಿಸಿರುವುದು ಗೂಗಲ್ ಪ್ಲೇ ನೀತಿಗಳ ಉಲ್ಲಂಘನೆಯಾಗಿದೆ ಎಂದಿದೆ.
ಇದರೊಂದಿಗೆ, ಪೇಟಿಎಂ ಫಸ್ಟ್ ಗೇಮ್ಸ್ ಆ್ಯಪ್ ಅನ್ನು ಕೂಡ ಪ್ಲೇ ಸ್ಟೋರ್ನಿಂದ ತೆಗೆಯಲಾಗಿದೆ. ಇದರಲ್ಲಿಯೂ ಹಣಕಾಸು ಬೆಟ್ಟಿಂಗ್ ಇರುವ ಆನ್ಲೈನ್ ಕ್ರಿಕೆಟ್ ಆಟದ ವೈಶಿಷ್ಟ್ಯಗಳಿದ್ದವು.
ಪ್ಲೇ ಸ್ಟೋರ್ನಲ್ಲಿ ಸದ್ಯಕ್ಕೆ ಹೊಸದಾಗಿ ಪೇಟಿಎಂ ಡೌನ್ಲೋಡ್ ಮಾಡಲಾಗದು. ಆದರೆ, ಈಗಾಗಲೇ ಬಳಕೆ ಮಾಡುತ್ತಿರುವವರಿಗೆ ಯಾವುದೇ ತೊಂದರೆಯಿಲ್ಲ.
ಈ ಕುರಿತು ಪೇಟಿಎಂ ಕೂಡ ತಕ್ಷಣ ಪ್ರತಿಕ್ರಿಯೆ ನೀಡಿದ್ದು, ಆ್ಯಪ್ ಅನ್ನು ಶೀಘ್ರವೇ ಗೂಗಲ್ ಪ್ಲೇ ಸ್ಟೋರ್ನಲ್ಲಿ ಪುನಃ ಅಳವಡಿಸಲಾಗುತ್ತದೆ. ಗ್ರಾಹಕರ ಹಣಕಾಸಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .
ಗೂಗಲ್ ಬ್ಲಾಗ್ನಲ್ಲಿ ಅದರ ಉಪಾಧ್ಯಕ್ಷೆ ಸುಝಾನ್ ಫ್ರೇ ಅವರು ಮಾಹಿತಿ ನೀಡಿದ್ದಾರೆ. ಆ್ಯಪ್ಗಳಲ್ಲಿ ಆನ್ಲೈನ್ ಕ್ಯಾಸಿನೋಗಳನ್ನೂ ನಡೆಸಲಾಗುತ್ತಿದೆ. ಯಾವುದೇ ಬೆಟ್ಟಿಂಗ್ನಲ್ಲಿ ಭಾಗಿಯಾಗುವಂತೆ ಅಥವಾ ಲಿಂಕ್ ಮೂಲಕ ಬೇರೆ ಗ್ಯಾಂಬ್ಲಿಂಗ್ ತಾಣಗಳಿಗೆ ಕರೆದೊಯ್ಯುವ ವೈಶಿಷ್ಟ್ಯಗಳು ನಮ್ಮ ನೀತಿಗೆ ವಿರುದ್ಧವಾದುದು ಎಂದಿದ್ದಾರೆ.
ಪೇಟಿಎಂ ಭಾರತದಲ್ಲಿ ಜನಪ್ರಿಯವಾಗುತ್ತಿರುವ ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) ಆಗಿದ್ದು, ಆನ್ಲೈನ್ನಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಲು ಮತ್ತು ಆಫ್ಲೈನ್ ಮಾರಾಟಗಾರರಿಗೆ ಹಣ ಪಾವತಿಸುವುದಕ್ಕೂ ಉಪಯೋಗಿಸಲಾಗುತ್ತಿತ್ತು.
ಬಳಕೆದಾರರ ರಕ್ಷಣೆಗಾಗಿಯೇ ಪ್ಲೇಸ್ಟೋರ್ ನೀತಿಗಳನ್ನು ರೂಪಿಸಲಾಗಿದೆ ಎಂದು ಗೂಗಲ್ ಹೇಳಿದ್ದು, ನೀತಿಗೆ ಬದ್ಧವಾಗಿ ಸೂಕ್ತ ಬದಲಾವಣೆ ಮಾಡಿ ಆ್ಯಪ್ ಅಪ್ಡೇಟ್ ಮಾಡಿಕೊಳ್ಳಲು ಪೇಟಿಎಂಗೆ ಅವಕಾಶವಿದೆ. ಈಗಾಗಲೇ ನೋಟಿಸ್ ಮೂಲಕ ತಿಳಿಸಲಾಗಿದೆ ಎಂದು ಹೇಳಿದೆ.

Average Rating