ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣಿಗಳು, ಪರಿಸರದ ಬಗೆಗಿನ ಕಾಳಜಿಯ ಭಾವ ಸರ್ವವಿದಿತ. ಹಲವು ಸಂದರ್ಭಗಳಲ್ಲಿ ಅವರು ಅದನ್ನು ಹೇಳಿಕೊಂಡಿದ್ದಾರೆ ಕೂಡ. ಆದರೆ, ಭಾನುವಾರ ಅವರು ರಾಷ್ಟ್ರಪಕ್ಷಿ ನವಿಲಿಗೆ ಕಾಳು ಹಾಕುವ ವಿಡಿಯೊ ಒಂದು ಭಾರಿ ಸದ್ದು ಮಾಡಿದೆ.
ಇನ್‌ಸ್ಟಾಗ್ರಾಂ, ಟ್ವಿಟರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಹಂಚಿಕೊಂಡಿದ್ದು, ಅದರಲ್ಲಿ ಮಯೂರಗಳು ಪ್ರಧಾನಿ ಸಮೀಪ ಸುಳಿದಾಡುತ್ತಾ, ಅವರ ಕೈಯಿಂದ ಆಹಾರ ಸೇವಿಸುವ ಒಲವಿನ ಅನುಬಂಧದ ದೃಶ್ಯ ಕಣ್ಮನ ಸೆಳೆಯುತ್ತದೆ.
ಅಮೂಲ್ಯ ಕ್ಷಣಗಳು ಹೆಸರಿನಲ್ಲಿ ಅವರು ಈ ವಿಡಿಯೊ ಹಂಚಿಕೊಂಡಿದ್ದು, ಸುಂದರ ಕವನವನ್ನೂ ಹಾಕಿದ್ದಾರೆ. ಬೆಳಗಿನ ದೈನಂದಿನ ವ್ಯಾಯಾಮದ ಸಂದರ್ಭ ಅವರು ನವಿಲಿನೊಂದಿಗೆ ಕೆಲವು ಕ್ಷಣ ಕಳೆಯುತ್ತಾರೆ.

ಪ್ರತಿ ದಿನವೂ ಅವುಗಳು ಮೋದಿಯವರ ಬೆಳಗಿನ ವಾಕಿಂಗ್ ಮತ್ತು ವ್ಯಾಯಾಮದ ಸಂದರ್ಭ ಸಾಥ್ ನೀಡುತ್ತವೆ. ಅವರ ಕೈಯಿಂದಲೇ ಆಹಾರ ತಿನ್ನುವ ರಾಷ್ಟ್ರಪಕ್ಷಿಗೆ ಈ ರಾಷ್ಟ್ರನಾಯಕನ ಬಗ್ಗೆ ಭಯವೇನೂ ಇಲ್ಲ. ಕೆಲವೊಂದು ಸಲ ಮೋದಿಯೊಂದಿಗೇ ಹೆಜ್ಜೆ ಹಾಕುತ್ತವೆ.
ದೆಹಲಿಯ ಲೋಕ ಕಲ್ಯಾಣ್ ಮಾರ್ಗ್‌ನಲ್ಲಿರುವ ಅವರ ನಿವಾಸದಿಂದ ಕಚೇರಿಗೆ ಮೋದಿ ನಡೆದು ಹೋಗುವ ಪಥವೂ ಈ 1.47 ನಿಮಿಷದ ವಿಡಿಯೊದಲ್ಲಿದೆ.

People questioning Modi for this humane gesture also. Buddhigedigalu.