Read Time:6 Minute, 33 Second

ರಾಹುಲ್ ಗಾಂಧಿ ಇಟಲಿಯ ಅಜ್ಜಿಮನೆಗೆ ಹೋಗಬಾರದೇ?: ನೆಟ್ಟಲ್ಲಿ ಪರ-ವಿರೋಧ ಚರ್ಚೆ, ಕೆಂಡ ಕಾರಿದ ಕಾಂಗ್ರೆಸ್

0 0

ನವದೆಹಲಿ: ಪಂಜಾಬ್-ದೆಹಲಿ ಗಡಿಯಲ್ಲಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಇವೆಲ್ಲವನ್ನೂ ಬಿಟ್ಟು ಕಾಂಗ್ರೆಸ್‌ನ ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿ ಅವರು ದೇಶದಿಂದ ಹೊರಗೆ ಹೋಗಿದ್ದಾರೆ.

ಅವರೆಲ್ಲಿಗೆ ಹೋಗಿದ್ದಾರೆ ಎಂಬುದನ್ನು ಕಾಂಗ್ರೆಸ್ ಪಕ್ಷವು ಅಧಿಕೃತವಾಗಿ ಪ್ರಕಟಿಸದಿರುವಾಗ, ಬಹುಶಃ ಹೊಸ ವರ್ಷವನ್ನು ಭರ್ಜರಿಯಾಗಿ ಆಚರಿಸಲು ಎಲ್ಲೋ ಹೋಗಿದ್ದಾರೆ ಎಂಬ ಗಾಳಿಸುದ್ದಿಗಳೇ ಹೆಚ್ಚಾದವು. ಕೊನೆಗೆ, ತಮ್ಮ ಅಜ್ಜಿ ಮನೆಗೆ ಅಂದರೆ ಇಟಲಿಗೆ (ಸೋನಿಯಾ ಗಾಂಧಿಯ ಊರು) ತೆರಳಿದ್ದಾರೆ ಎಂಬ ವಿಷಯ ಬಯಲಾಗುತ್ತಿದ್ದಂತೆಯೇ ಇಂಟರ್ನೆಟ್‌ನಲ್ಲಿ ಸಾಕಷ್ಟು ಮೀಮ್‌ಗಳು, ಜೋಕ್‌ಗಳು ಹರಿದಾಡಿವೆ.

ರಾಹುಲ್ ಗಾಂಧಿಯ ಕ್ರಮವನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಬೆಂಬಲಿಗರು ಇಂಟರ್ನೆಟ್ಟಿನಲ್ಲಿ ಭಾರಿ ಪ್ರಯಾಸಪಟ್ಟರೂ, ಅವರು ರಜಾದಿನಗಳನ್ನು ಕಳೆಯಲು ಹೋಗಿದ್ದಾರೆ ಎಂದು ಪಕ್ಷವೇ ಪ್ರಕಟಿಸಿಬಿಟ್ಟಾಗ, ಬೆಂಬಲಿಗರು ಹೈರಾಣಾದರು.

ಅವರು ಇಟಲಿಯ ಮಿಲಾನ್‌ಗೆ ಖತಾರ್ ಏರ್‌ವೇರ್ ವಿಮಾನದ ಮೂಲಕ ಹೋಗಿದ್ದಾರೆ ಎಂದು ವರದಿಗಳು ಬಂದಾಗ, ಕಾಂಗ್ರೆಸ್ ಬೆಂಬಲಿಗ ನೆಟ್ಟಿಗರು ‘ಇದು ಸುಳ್ಳು ಸುದ್ದಿ. ರೈತರ ಪ್ರತಿಭಟನೆ, ಕಾಂಗ್ರೆಸ್ ಸ್ಥಾಪನಾ ದಿನ – ಇವೆಲ್ಲವನ್ನೂ ಬಿಟ್ಟು ಅವರು ದೇಶದಿಂದ ಹೊರಗೆ ಹೋಗಿಲ್ಲ’ ಎಂದು ಭರ್ಜರಿಯಾಗಿ ಸಮರ್ಥಿಸಿಕೊಂಡಿದ್ದರು. ಅವರು ರಜಾದಿನಗಳ ಮಜಾಕ್ಕಾಗಿ ಹೋಗಿಲ್ಲ ಎಂದು ಭಾರಿ ಪೋಸ್ಟ್‌ಗಳು ಹರಿದಾಡಿದವು.

ಕಾಂಗ್ರೆಸ್ ಬೆಂಬಲಿಗರು ಸಮರ್ಥಿಸುತ್ತಲೇ ಇದ್ದರು.

ಪಂಜಾಬ್ ಯುವ ಕಾಂಗ್ರೆಸ್ ಕೂಡ ಇದನ್ನೇ ಹೇಳಿತು.

ಆದರೆ, ಅವರು ಖಾಸಗಿ ಪ್ರವಾಸದಲ್ಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದಾಗ ಬಾಯಿಗೆ ಬಂದಂತೆ ಇತರರ ಮೇಲೆ ಹರಿಹಾಯ್ದವರೆಲ್ಲರೂ ಗಪ್‌ಚುಪ್ ಆದರು. ಎಲ್ಲಿಗೆ ಅಂತ ಕಾಂಗ್ರೆಸ್ ಹೇಳಿಲ್ಲ, ಬೇರೆ ಮಾಧ್ಯಮಗಳು ಅದನ್ನು ಖಚಿತಪಡಿಸಿದವು.

ಕಾಂಗ್ರೆಸ್‌ನ 136ನೇ ಸ್ಥಾಪನಾ ದಿನ ಇಂದು (28 ಡಿಸೆಂಬರ್ 2020). ಕೆಲವು ದಿನಗಳಿಂದ ರೈತರ ಪ್ರತಿಭಟನೆಯ ಪರವಾಗಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡುತ್ತಲೇ ಇದ್ದ ರಾಹುಲ್ ಗಾಂಧಿ, ಪ್ರತಿಭಟನೆಯು ನಿರ್ಣಾಯಕ ಹಂತಕ್ಕೆ ತಲುಪುವಾಗ ದಿಢೀರ್ ಆಗಿ ಅಜ್ಜಿ ಮನೆಗೆ ತೆರಳಿದ್ದಾರೆ. ಇಷ್ಟೇ ಅಲ್ಲ, ಅವರು ಕೇರಳದ ವಯನಾಡ್‌ನ ಸಂಸದರೂ ಹೌದು. ಅಲ್ಲಿ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷದ ಕಾರ್ಯನಿರ್ವಹಣೆ ಕುರಿತಾಗಿನ ಮಹತ್ವದ ಪ್ರಗತಿ ಪರಿಶೀಲನಾ ಸಭೆಗೂ ಹಾಜರಾಗುತ್ತಿಲ್ಲ.

ಇಷ್ಟಲ್ಲದೆ, ಹಿಂದೆಯೂ ಮಹತ್ವದ ಸಂದರ್ಭಗಳಲ್ಲಿ ರಾಹುಲ್ ಗಾಂಧಿ ಅವರು ದೇಶದಲ್ಲಿರಲಿಲ್ಲ ಎಂಬುದೂ ನೆನಪಿಸಿಕೊಳ್ಳಬೇಕಾದ ಸಂಗತಿ. ದೇಶದ ವಿವಿಧೆಡೆ ಸಿಎಎ ತಿದ್ದುಪಡಿ ವಿರೋಧಿಸಿ ಮೋದಿ ವಿರುದ್ಧ ಕಾಂಗ್ರೆಸ್, ಎಡಪಂಥೀಯರು, ಮುಸ್ಲಿಮರು ವೃಥಾ ಪ್ರತಿಭಟನೆ ನಡೆಸಿ, ಗಲಭೆ ಎಬ್ಬಿಸಿದ ಸಂದರ್ಭದಲ್ಲೊಮ್ಮೆ ಅವರು ಕೊರಿಯಾಕ್ಕೆ ತೆರಳಿ ಟೀಕೆಗೆ ಗುರಿಯಾಗಿದ್ದರು.

ಇತ್ತೀಚೆಗೆ ಬಿಹಾರ ಚುನಾವಣೆಗಳ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಬಿಟ್ಟು, ಶಿಮ್ಲಾದಲ್ಲಿ ರಜಾ ದಿನ ಕಳೆಯುತ್ತಿದ್ದರೆಂಬ ಆರೋಪ ಅವರ ಮೇಲಿದೆ. 2019ರ ಚುನಾವಣಾ ಫಲಿತಾಂಶದ ಬಳಿಕವೂ ಅವರು ರಜೆಯಲ್ಲಿ ತೆರಳಿದ್ದರು.

2015ರಲ್ಲಿ ಅಸ್ಸಾಂ ಚುನಾವಣೆಗಳ ಹೊಸ್ತಿಲಲ್ಲಿ ಎರಡು ತಿಂಗಳು ದಿಢೀರ್ ನಾಪತ್ತೆಯಾಗಿ ಸುದ್ದಿ ಮಾಡಿದ್ದರು.

2019ರ ಆದಿ ಭಾಗದಲ್ಲಿ ಪಕ್ಷವು ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನ ಚುನಾವಣೆಗೆ ಸಜ್ಜಾಗುತ್ತಿದ್ದ ಹಂತದಲ್ಲಿ ರಾಹುಲ್ ಗಾಂಧಿ ವಿದೇಶಕ್ಕೆ ಹಾರಿದ್ದರು.

2018ರಲ್ಲಿಯೂ ತಾಯಿ ಸೋನಿಯಾ ಗಾಂಧಿ ಜೊತೆಗೆ ಅಮೆರಿಕಕ್ಕೆ ‘ವಾರ್ಷಿಕ ವೈದ್ಯಕೀಯ ಚೆಕಪ್‌ಗಾಗಿ’ ತೆರಳಿದ್ದರು.

2016ರ ಡಿಸೆಂಬರ್ ತಿಂಗಳಲ್ಲಿ ಪಂಜಾಬ್ ಚುನಾವಣೆಯ ಹೊಸ್ತಿಲಲ್ಲಿಯೂ ರಾಹುಲ್ ಗಾಂಧಿ ಹೊಸ ವರ್ಷಾಚರಣೆಗೆ ವಿದೇಶಕ್ಕೆ ಹೋಗಿದ್ದರು. 2014ರಲ್ಲಂತೂ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೇರಿ, ಕಾಂಗ್ರೆಸ್ ಕೇವಲ 44 ಸ್ಥಾನಗಳಿಗೆ ಕುಸಿದು ಹೀನಾಯ ಸೋಲುಂಡ ಸಂದರ್ಭದಲ್ಲಿ, ರಾಹುಲ್ ವಿದೇಶಕ್ಕೆ ತೆರಳಿದ್ದರು.

ಮಹತ್ವದ ಸನ್ನಿವೇಶಗಳಲ್ಲಿ, ಕಾಂಗ್ರೆಸ್ ಮುಖಂಡರಿಗೆ, ಕಾರ್ಯಕರ್ತರಿಗೆ ಅತ್ಯಗತ್ಯವಾಗಿ ಲಭ್ಯ ಇರಬೇಕಾದ ಸಂದರ್ಭಗಳಲ್ಲಿ ರಾಹುಲ್ ವಿದೇಶಕ್ಕೆ ಹಾರಿದ ಮತ್ತಷ್ಟು ವಿವರಗಳು ಈ ಪಟ್ಟಿಯಲ್ಲಿವೆ.

ಹೋಗಬಾರದೇ?
ರಾಹುಲ್ ಇಟಲಿಗೆ ಹೋಗಿರುವ ಬಗ್ಗೆ ಹಲವರು ಟೀಕೆ ಮಾಡಿದ ಬೆನ್ನಿಗೇ ಕಾಂಗ್ರೆಸ್ ಸಮರ್ಥನೆ ಮಾಡಿಕೊಂಡಿದೆ. “ರಾಹುಲ್ ಗಾಂಧಿ ಅಜ್ಜಿಯನ್ನು (ಸೋನಿಯಾ ಗಾಂಧಿಯ ತಾಯಿ) ನೋಡಲು ಹೋಗಿದ್ದಾರೆ. ಇದು ತಪ್ಪೇ? ಖಾಸಗಿ ಭೇಟಿಗೆ ಎಲ್ಲರಿಗೂ ಹಕ್ಕಿದೆ. ಬಿಜೆಪಿ ಕೀಳು ರಾಜಕೀಯದಲ್ಲಿ ತೊಡಗಿದೆ. ಒಬ್ಬನೇ ನಾಯಕನನ್ನು ಟಾರ್ಗೆ ಮಾಡಲೆಂದೇ ಅವರು ರಾಹುಲ್ ಗಾಂಧಿ ಮೇಲೆ ಮುಗಿಬಿದ್ದಿದ್ದಾರೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಎಎನ್ಐಗೆ ಪ್ರತಿಕ್ರಿಯಿಸಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಟ್ವೀಟ್ ಮಾಡಿ, “ಕಾಂಗ್ರೆಸ್ ಇಲ್ಲಿ 136ನೇ ಸಂಸ್ಥಾಪನಾ ದಿನ ಆಚರಿಸುತ್ತಿದ್ದರೆ, ರಾಹುಲ್ ಗಾಂಧಿ ನೌ ದೋ ಗ್ಯಾರಹ್ ಆಗಿದ್ದಾರೆ (ಕಾಲಿಗೆ ಬುದ್ಧಿ ಹೇಳಿದ್ದಾರೆ)” ಎಂದು ಟ್ವೀಟ್ ಮಾಡಿ ಕಿಚಾಯಿಸಿದ್ದರು. ಇದಕ್ಕೆ ಕಾಂಗ್ರೆಸ್ ಈ ರೀತಿ ಪ್ರತಿಕ್ರಿಯಿಸಿದೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Farmer Protest: ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿರುವ ರಾಹುಲ್, ಕೇಜ್ರಿವಾಲ್: ಸಾಕ್ಷ್ಯಾಧಾರ ಸಮೇತ ನೈಜಮುಖ ಬಟಾಬಯಲು
Next post ಅಂಬಾನಿಯ ಜಿಯೋ ಟವರ್‌ಗಳು ಟಾರ್ಗೆಟ್, ಆದ್ರೆ ರೈತ ಪ್ರತಿಭಟನೆಗೆ ಬೆಂಬಲಿಸಿದ ಕೆನಡಾ ಉದ್ಯಮಕ್ಕೇ ಹಾನಿ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ