Read Time:3 Minute, 43 Second

ತಮ್ಮ ‘ದೇವರು’ ರಾಹುಲ್ ಗಾಂಧಿಯನ್ನು ‘ನರ್ವಸ್ ನಾಯಕ’ ಎಂದ ಒಬಾಮಗೆ ಕಾಂಗ್ರೆಸ್ ಸವಾಲು

0 0

ನವದೆಹಲಿ: ತಮ್ಮ ‘ಪ್ರೀತಿಯ’ ನೇತಾರ, ಪಕ್ಷದ ‘ದೇವರು’ ವಯನಾಡ್ ಸಂಸದ ರಾಹುಲ್ ಗಾಂಧಿಯನ್ನು ಅಳುಕು, ಅಪಕ್ವತೆಯುಳ್ಳವರು ಎಂದು ಬಣ್ಣಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.

ಒಬಾಮ ಅವರು ತಮ್ಮ ‘ಬಾವಿಯೊಳಗಿನ ಕಪ್ಪೆ’ ಮಾನಸಿಕತೆಯಿಂದ ಹೊರಬಂದು, ತಮ್ಮ ಪ್ರೀತಿಯ ನಾಯಕನೊಂದಿಗೆ ಯಾವುದೇ ವಿಷಯದ ಬಗ್ಗೆ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ಒತ್ತಾಯಿಸಿದ್ದಾರೆ.

ಇತ್ತೀಚಿನ ಪುಸ್ತಕದಲ್ಲಿ ಒಬಾಮ ಅವರು ರಾಹುಲ್ ಗಾಂಧಿಯನ್ನು ‘ಅಧ್ಯಾಪಕರಿಗೆ ಕೋರ್ಸ್ ವರ್ಕ್ ಮುಗಿಸಿ, ಅವರಿಂದ ಶಹಬ್ಬಾಸ್ ಗಿಟ್ಟಿಸಲು ಕಾದು ನಿಲ್ಲುವ ವಿದ್ಯಾರ್ಥಿಯಂತೆ’ ಎಂದು ಹಾಗೂ ಅಪ್ರಬುದ್ಧ, ಅಪಕ್ವ ನಾಯಕ ಎಂದೂ ಬರೆದಿದ್ದರು. ಈ ಹೇಳಿಕೆ ಇಟ್ಟುಕೊಂಡು ಬಿಜೆಪಿ ಕೂಡ ‘ಇದನ್ನು ತಾವು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದೇವೆ’ ಎಂದು ಕುಟುಕಿತ್ತು.

ಇದರಿಂದ ಕೆಂಡಾಮಂಡಲವಾಗಿರುವ ಕಾಂಗ್ರೆಸ್ ಮುಖಂಡ ಚೌಧುರಿ, ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಒಬಾಮ ಅವರನ್ನು ಟ್ಯಾಗ್ ಮಾಡಿಯೇ ಟ್ವೀಟ್ ಬರೆದಿರುವ ಅವರು, ‘ಈ ಪರಿಯ ಕೀಳಭಿರುಚಿಯ ಹೇಳಿಕೆ ನೀಡುವ ಮೊದಲು, ಜಗತ್ತಿನ ಯಾವುದೇ ಸಮಕಾಲೀನ ವಿಚಾರಗಳ ಬಗ್ಗೆ ನೇರವಾಗಿ ಅಥವಾ ವರ್ಚುವಲ್ ಆಗಿ ಸಂವಹನ ನಡೆಸಿ. ಆಗ ವಾಸ್ತವ ಗೊತ್ತಾಗುತ್ತದೆ. ನಮ್ಮ ನಾಯಕನ ಮೌಲ್ಯಮಾಪನ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಿ, ಬಾವಿಯೊಳಗಿನ ಕಪ್ಪೆಯಂತಾಗಬೇಡಿ’ ಎಂದು ಟ್ವೀಟಿಸಿದ್ದಾರೆ.

ಹಲವು ಕಾಂಗ್ರೆಸ್ ಮುಖಂಡರೂ ರಾಹುಲ್ ಪರ ನಿಂತಿದ್ದಾರೆ. ಒಬಾಮ ಭೇಟಿಯ ಬಳಿಕ ರಾಹುಲ್ ಸಾಕಷ್ಟು ಬದಲಾಗಿದ್ದಾರೆ. 8-10 ವರ್ಷಗಳ ಹಿಂದೆ ಅಮೆರಿಕ ಅಧ್ಯಕ್ಷರಾಗಿ ಭಾರತಕ್ಕೆ ಬಂದಿದ್ದಾಗ ಒಬಾಮ-ರಾಹುಲ್ ಮಧ್ಯೆ ಕೆಲ ಕ್ಷಣಗಳ ಭೇಟಿ ನಡೆದಿತ್ತು. ಅವರೀಗ ಸಾಕಷ್ಟು ಅನುಭವ ಪಡೆದಿದ್ದಾರೆ ಎಂದು ತಾರೀಖ್ ಅನ್ವರ್ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ, ‘ನಕಲಿ ಬಾಬಾ’ ಎಂದೇ ಕರೆಸಿಕೊಳ್ಳುತ್ತಿರುವ ಆಚಾರ್ಯ ಪ್ರಮೋದ್ ಅವರಂತೂ ರಾಹುಲ್‌ರನ್ನು ‘ಕಾಂಗ್ರೆಸ್‌ನ ದೇವರು’ ಎಂದೇ ಬಣ್ಣಿಸಿದ್ದಾರೆ. ಅಷ್ಟಲ್ಲದೆ, ಇದಕ್ಕೂ ಪ್ರಧಾನಿ ನರೇಂದ್ರ ಮೋದಿಯನ್ನು ಎಳೆದು ತಂದಿದ್ದಾರೆ. “ಬಹುಶಃ ತಾನು ಮೋದಿ ಅವರ ಅಂಧ ಅಭಿಮಾನಿ ಅಂತ ಒಬಾಮ ಬಹಿರಂಗವಾಗಿ ಹೇಳಿಕೆ ನೀಡಲಿ” ಎಂದಿದ್ದಾರೆ ಅವರು.

ಎ ಪ್ರಾಮಿಸ್ಡ್ ಲ್ಯಾಂಡ್ ಎಂಬ ತಮ್ಮ ಹೊಸ ಪುಸ್ತಕದಲ್ಲಿ ಒಬಾಮ ಅವರು ರಾಹುಲ್ ಗಾಂಧಿಯನ್ನು ‘ನರ್ವಸ್ ನಾಯಕ’ ಎಂದು ಕರೆದಿದ್ದರು.

ರಾಹುಲ್ ಗಾಂಧಿ ಬಗ್ಗೆ ಒಬಾಮ ಉಲ್ಲೇಖಿಸಿದ್ದು ಹೀಗೆ: “Rahul Gandhi has a nervous, unformed quality about him as if he were a student who’d done the coursework and was eager to impress the teacher but deep down lacked either the aptitude or the passion to master the subject”.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಅರ್ನಬ್ ಬಿಡುಗಡೆ: ‘ಆತ್ಮಹತ್ಯೆ ಮಾಡಿಕೊಂಡವರು ಸರ್ಕಾರವೇ ಹೊಣೆ ಎಂದು ಬರೆದಿಟ್ಟರೆ, ಮುಖ್ಯಮಂತ್ರಿಯನ್ನು ಬಂಧಿಸಬೇಕೇ?’
Next post ಬಿಜೆಪಿಗೆ ಸಮರ್ಥ ಎದುರಾಳಿ ಕಾಂಗ್ರೆಸ್ ಅಲ್ಲ: ಕಪಿಲ್ ಸಿಬಲ್ ಮತ್ತೆ ಅಸಮಾಧಾನ

ಸುದ್ದಿ ಸಂಚಯ

ಇವುಗಳನ್ನೂ ನೋಡಿ