ನವದೆಹಲಿ: ಭಾರತದ ಸರ್ಕಾರಕ್ಕೆ ಕೋವಿಡ್-19 ಅನಾಹುತಗಳು, ರೈತರ ಅನಗತ್ಯ ಪ್ರತಿಭಟನೆಗಳ ಬಗ್ಗೆ ಮಾತ್ರವೇ ತಲೆಕೆಡಿಸಿಕೊಳ್ಳುವುದಲ್ಲ. ಕಾಂಗ್ರೆಸ್ ಮತ್ತು ಅದರ ಪರವಾಗಿರುವ ಮಾಧ್ಯಮಗಳ ಸುಳ್ಳು ಪ್ರಚಾರ ಕಾರ್ಯಗಳಿಗೂ ಆಗಾಗ್ಗೆ ಸ್ಪಷ್ಟನೆ ನೀಡುವ ಕೆಲಸವೂ ನಡೆಯಬೇಕಿದೆ ಎಂಬುದಕ್ಕೆ ಮತ್ತೊಂದು ಪುರಾವೆಯಿದು.
ಈಗ ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷರಾಗಿ ಪಟ್ಟಾಭಿಷೇಕ ಮಾಡಿಸಿಕೊಳ್ಳುವ ಸಾಧ್ಯತೆಗಳಿರುವ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನೇತೃತ್ವದ ಸರ್ಕಾರದ ವಿರುದ್ಧ ಸುಳ್ಳು ಮತ್ತು ಅಪಪ್ರಚಾರಗಳ ಕಾರ್ಯವನ್ನು ಮತ್ತೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Pulwama Attack: ಪಾಪಿ ಪಾಕಿಸ್ತಾನದ ‘ತಪ್ಪೊಪ್ಪಿಗೆ’: ಥಂಡಾ ಹೊಡೆದ ಕಾಂಗ್ರೆಸ್ ವಿರುದ್ಧ ಮೋದಿ ಗರ್ಜನೆ
ಮಾಸ್ಕೋ ಮುನಿಸಿಕೊಂಡಿರುವುದರಿಂದ ದೇಶದ ಮಹತ್ವದ ಮಿತ್ರನಾಗಿರುವ ರಷ್ಯಾವು ಇತ್ತೀಚೆಗೆ ಭಾರತದೊಂದಿಗಿನ ತನ್ನ ಶೃಂಗ ಸಮಾವೇಶವನ್ನೇ ರದ್ದುಪಡಿಸಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ‘ದಿ ಪ್ರಿಂಟ್’ ಎಂಬ ಮೋದಿ ವಿರೋಧಿ ಮಾಧ್ಯಮದ ವರದಿಯನ್ನು ಕೋಟ್ ಮಾಡಿ ಟ್ವೀಟ್ ಮಾಡಿದ್ದರು.
ಈ ವರದಿಯು ಕೂಡ ಇದೇ ರೀತಿಯಲ್ಲಿ ಸುಳ್ಳು ಬಿತ್ತರಿಸಿದ್ದು, ಭಾರತವು ಅಮೆರಿಕಕ್ಕೆ ಹತ್ತಿರವಾಗುತ್ತಿರುವುದರಿಂದ ಅಸಮಾಧಾನಗೊಂಡಿದ್ದು, ಇದಕ್ಕಾಗಿಯೇ ರಷ್ಯಾವು ಈ ಶೃಂಗ ಸಮಾವೇಶವನ್ನು ಮುಂದೂಡಿದೆ ಎಂದು ‘ದಿ ಪ್ರಿಂಟ್’ ಅಪ್ಪಟ ಸುಳ್ಳನ್ನು ಪ್ರಕಟಿಸಿತ್ತು.
ಇದನ್ನೂ ಓದಿ: ಭಾರತೀಯ ರೈಲ್ವೇಯನ್ನು ಅಡಾನಿಗೆ ಒಪ್ಪಿಸಿದ್ದಾರೆಂದು ಫೇಕ್ ಸುದ್ದಿ ಹರಡಿದ ಪ್ರಿಯಾಂಕಾ ವಾದ್ರ: ಫೇಸ್‌ಬುಕ್‌ನಿಂದ ಪೋಸ್ಟ್ ಡಿಲೀಟ್
ಇದನ್ನೇ ಆಧಾರವಾಗಿಟ್ಟುಕೊಂಡ ರಾಹುಲ್ ಗಾಂಧಿ ಕೂಡ, ‘ರಷ್ಯಾವು ಭಾರತ ಅತ್ಯಂತ ಮಹತ್ವದ ಮಿತ್ರರಾಷ್ಟ್ರ. ನಮ್ಮ ಈ ಪಾರಂಪರಿಕ ಸಂಬಂಧವನ್ನೇ ಈಗ ಹಾಳು ಮಾಡಿಕೊಳ್ಳಲಾಗಿದೆ ಮತ್ತು ಭವಿಷ್ಯದಲ್ಲಿ ಇದು ಅಪಾಯಕಾರಿ’ ಅಂತೆಲ್ಲಾ ಬರೆದಿದ್ದರು.
ಕೊನೆಗೆ, ಇಷ್ಟೊಂದು ಕೆಲಸ ಕಾರ್ಯಗಳ ಮಧ್ಯೆ ಭಾರತ ಸರ್ಕಾರಕ್ಕೆ ಈ ಅಪಪ್ರಚಾರದ ಬಗ್ಗೆ ನೀಡುವ ಕೆಲಸವೂ ಸಿಕ್ಕಿದೆ. ವಿದೇಶಾಂಗ ವ್ಯವಹಾರಗಳ ಖಾತೆ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು ಟ್ವೀಟ್ ಮಾಡಿ, ಈ ಕುರಿತು ವಿವರವಾದ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್‌ನಿಂದಾಗಿ 2020ರ ಸಮಾವೇಶ ನಡೆದಿಲ್ಲ. ಎರಡೂ ದೇಶಗಳು ಒಪ್ಪಿಯೇ ತೆಗೆದುಕೊಂಡ ನಿರ್ಧಾರವಿದು. ಈ ಬಗ್ಗೆ ಬೇರೇನು ಹೇಳಿದರೂ ಅದು ಸುಳ್ಳು ಮತ್ತು ದಾರಿತಪ್ಪಿಸುವ ಹೇಳಿಕೆಗಳು. ಮಹತ್ವದ ಸಂಬಂಧಗಳ ಕುರಿತು ಸುಳ್ಳು ವರದಿಗಳನ್ನು ಹರಡುವುದು ಕೂಡ ಅತ್ಯಂತ ಬೇಜವಾಬ್ದಾರಿಯುತ ನಡೆ ಎಂದು ಸ್ಪಷ್ಟಪಡಿಸಿದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ.
ಇಷ್ಟೇ ಅಲ್ಲ, ರಷ್ಯಾ ರಾಯಭಾರ ಕಚೇರಿಯೂ ಈ ಕುರಿತು ಸ್ಪಷ್ಟನೆ ನೀಡಿದೆ. ಈ ಬಗ್ಗೆ ಭಾರತದಲ್ಲಿರುವ ರಷ್ಯಾದ ರಾಯಭಾರಿ ನಿಕೊಲಯ್ ಕುಡಶೆವ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಈ ವರದಿಯೇ ಸುಳ್ಳು ಎಂದಿದ್ದಾರೆ.
ಎರಡು ದಶಕಗಳಲ್ಲಿ ಮೊದಲ ಬಾರಿಗೆ ಭಾರತ-ರಷ್ಯಾ ಸಮಾವೇಶವನ್ನು ಮೊದಲ ಬಾರಿಗೆ ಮುಂದೂಡಲಾಗಿದೆ ಎಂಬ ಶೀರ್ಷಿಕೆಯ ಈ ವರದಿ ಸತ್ಯಕ್ಕೆ ತೀರಾ ದೂರವಿದೆ. ಕೋವಿಡ್-19 ಹೊರತಾಗಿಯೂ ಉಭಯ ರಾಷ್ಟ್ರಗಳ ಸಂಬಂಧ ಚೆನ್ನಾಗಿಯೇ ಇದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಸಮಾವೇಶವು ಶೀಘ್ರವೇ ನಡೆಯಲಿದೆ ಎಂದೂ ಅವರು ಆಶಾವಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಭವಿಷ್ಯದ ಪ್ರಧಾನಿ ಎಂದೇ ಕರೆಯಲ್ಪಡುತ್ತಿರುವ ರಾಹುಲ್ ಗಾಂಧಿ ಅವರು ಈ ರೀತಿಯ ಸುಳ್ಳುಗಳನ್ನು ಪ್ರಚಾರ ಮಾಡುತ್ತಿರುವುದು ಇದೇ ಮೊದಲಲ್ಲ. ನ್ಯಾಯಾಧೀಶರ ವಿರುದ್ಧವೇ ಹೇಳಿಕೆ ನೀಡಿದ್ದಕ್ಕಾಗಿ ಅವರು ಸುಪ್ರೀಂ ಕೋರ್ಟಿನಲ್ಲಿ ಕ್ಷಮೆ ಕೇಳಬೇಕಾಗಿಬಂದಿತ್ತು.
ಅದೇ ರೀತಿ, ರಕ್ಷಣಾ ವಿಚಾರಗಳು, ರಾಷ್ಟ್ರೀಯ ಭದ್ರತೆ ಹಾಗೂ ಅಂತರರಾಷ್ಟ್ರೀಯ ಸಂಬಂಧಗಳ ಕುರಿತು ಉದ್ದೇಶಪೂರ್ವಕವಾಗಿ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಲೇ ಬಂದಿದ್ದರು. ವಿಶೇಷವೆಂದರೆ, ಪ್ರತಿ ಬಾರಿಯೂ ಈ ರೀತಿಯ ಸುಳ್ಳುಗಳು ಬಯಲಾಗುತ್ತಿದ್ದರೂ, ಅವರು ಈ ಬಗ್ಗೆ ಕ್ಷಮೆ ಯಾಚಿಸುವ ಅಥವಾ ಕನಿಷ್ಠ ವಿಷಾದ ವ್ಯಕ್ತಪಡಿಸುವ ಸೌಜನ್ಯವಾದರೂ ತೋರುತ್ತಿಲ್ಲ ಎಂಬುದು ಇದುವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ ತಿಳಿಯುವ ಸಂಗತಿ.
ರಫೇಲ್ ಯುದ್ಧವಿಮಾನಗಳ ಪೂರೈಕೆ ಕುರಿತು ‘ಹಗರಣ ನಡೆದಿದೆ’ ಅಂತ ಚುನಾವಣೆ ಬಂದಾಗಲೆಲ್ಲಾ ಪದೇ ಪದೇ ಸುಳ್ಳು ಪ್ರಚಾರ ಮಾಡುತ್ತಿದ್ದ ರಾಹುಲ್ ಗಾಂಧಿ, ಈಗ ಅದರ ಬಗ್ಗೆ ಮೌನವಾಗಿದ್ದಾರೆ. ಹಲವು ಬಾರಿ ಸುಪ್ರೀಂ ಕೋರ್ಟಿನಿಂದ ಎಚ್ಚರಿಕೆಯೂ ಅವರಿಗೆ ದೊರೆತಿತ್ತು.
ಇದನ್ನೂ ಓದಿ: ಮೋದಿ ವಿರುದ್ಧದ ರೈತ ಹೋರಾಟ | ಕಿಸಾನ್ ಯೂನಿಯನ್‌ಗೆ ವಿದೇಶದಿಂದ ಅಕ್ರಮವಾಗಿ ಹರಿದುಬರುತ್ತಿದೆ ಲಕ್ಷ ಲಕ್ಷ ಹಣ!

Average Rating