Read Time:1 Minute, 54 Second

ಮತಿಗೇಡಿ ಪಾಕ್ ಉಗ್ರರು ಕೊರೆದ ಸುರಂಗದಲ್ಲಿ ಸಾಗಿದ ಭಾರತೀಯ ಯೋಧರು ಕಾಲಿಟ್ಟದ್ದು ಪಾಕ್ ನೆಲಕ್ಕೆ!

0 0

ನವದೆಹಲಿ: ಪಾತಕಿ ಪಾಕಿಸ್ತಾನವು ಗಡಿಯಲ್ಲಿ ಸುರಂಗ ತೋಡಿಯೇ ಉಗ್ರಗಾಮಿಗಳನ್ನು ಭಾರತದೊಳಕ್ಕೆ ನುಸುಳುಸಿತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಅದೇ ಸುರಂಗವನ್ನು ಪತ್ತೆ ಹಚ್ಚಿದ ಭಾರತೀಯ ಭದ್ರತಾ ಪಡೆಗಳು, ಅದರಲ್ಲೇ ಮುಂದೆ ಮುಂದೆ ಸಾಗಿ, ಪಾಕಿಸ್ತಾನದ ನೆಲಕ್ಕೆ ಕಾಲಿಟ್ಟಿದ್ದಾರೆ!

ಕಳೆದ ವಾರ ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನಿ ಉಗ್ರಗಾಮಿಗಳನ್ನು ಪತ್ತೆ ಹಚ್ಚಿ ಕೊಂದು ಹಾಕಿದ್ದವು. ಅವರು ಬಂದಿರುವುದು ಹೇಗೆಂಬುದರ ಬಗ್ಗೆ ತನಿಖೆ ಆರಂಭಿಸಿ, ಸುರಂಗದೊಳಗೆ ಹೊಕ್ಕು ಮುಂದೆ ಸಾಗಿ, 200 ಮೀಟರ್‌ನಷ್ಟು ದೂರ ಪಾಕಿಸ್ತಾನದೊಳಗೆ ಹೋದಾಗಲೇ, ಈ ಸುರಂಗದ ಪ್ರವೇಶ ದ್ವಾರ ಕಾಣಿಸಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಾಕೋಟ್ ವಿಮಾನ ದಾಳಿಯ ಬಳಿಕ ಕಂಗೆಟ್ಟಿದ್ದ ಪಾಕಿಸ್ತಾನಿ ಉಗ್ರಗಾಮಿಗಳು, ರಹಸ್ಯವಾಗಿ ಭಾರತದೊಳಗೆ ನುಗ್ಗಲು ಸುರಂಗ ತೋಡಿದ್ದರು. ನ.22ರಂದು ಇದನ್ನು ಸಾಂಬಾ ಸೆಕ್ಟರ್‌ನಲ್ಲಿ ಪತ್ತೆ ಹಚ್ಚಿದ ಭಾರತದ ವೀರ ಯೋಧರು, ಉಗ್ರರ ಸಂಚನ್ನು ಬಯಲು ಮಾಡಿದ್ದರು.

ಸರ್ವನಾಶವಾದ ಉಗ್ರಗಾಮಿಗಳ ಮೊಬೈಲ್ ಫೋನ್‌ನಿಂದಾಗಿ ಸುರಂಗವಿರುವುದು ಪತ್ತೆಯಾಗಿತ್ತು ಎಂದು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕ ರಾಕೇಶ್ ಆಸ್ಥಾನ ಹೇಳಿದ್ದಾರೆ.

ನಗ್ರೋಟಾ ಟಾಲ್ ಬೂತ್‌ನ ಬಳಿ ನ.19ರಂದು ನಡೆದಿದ್ದ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರನ್ನು ಮಟ್ಯಾಶ್ ಮಾಡಲಾಗಿದ್ದು, ಭಾರತದ ವೀರ ಯೋಧರು ಭಾರಿ ದೊಡ್ಡ ಅಪಾಯವೊಂದನ್ನು ತಪ್ಪಿಸಿದ್ದರು.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ರೈತರೇ, ಕೃಷಿ ಕಾಯ್ದೆಯಿಂದ ಎಷ್ಟೆಲ್ಲ ಅನುಕೂಲಗಳಿವೆ ಗೊತ್ತೇ?: ಅಪಪ್ರಚಾರಕ್ಕೆ ಮೋದಿ ಸವಿವರ ತಿರುಗೇಟು
Next post ‘ಟುಕ್ಡೇ ಗ್ಯಾಂಗ್‌’ನಿಂದ ರೈತರ ಹೆಸರಲ್ಲಿ ಶಹೀನ್‌ಬಾಗ್ 2.0 ಸಂಚು: ಬಿಜೆಪಿ ಎಚ್ಚರಿಕೆ

ಸುದ್ದಿ ಸಂಚಯ

ಇವುಗಳನ್ನೂ ನೋಡಿ