Read Time:4 Minute, 41 Second

ಪಾಕ್ ವೇದಿಕೆಯಲ್ಲಿ ಭಾರತಕ್ಕೆ ಅವಮಾನ: ರಾಹುಲ್ ಗಾಂಧಿಯಲ್ಲ, ರಾಹುಲ್ ಲಾಹೋರಿ ಎಂದ ಬಿಜೆಪಿ

0 0

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಬಿಜೆಪಿ ರಾಹುಲ್ ಲಾಹೋರಿ ಎಂಬ ಹೊಸ ಹೆಸರು ನೀಡಿದೆ.

ಕಾಂಗ್ರೆಸ್ ಮುಖಂಡರು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ, ವಿಶೇಷವಾಗಿ ಪಾಕಿಸ್ತಾನದಲ್ಲಿ ಭಾರತದ ಮಾನ ಕಳೆಯುತ್ತಿರುವ ವಿಧಾನಗಳನ್ನು ಗಮನಿಸಿದರೆ, ರಾಹುಲ್ ಗಾಂಧಿ ಬಹುಶಃ ಪಾಕಿಸ್ತಾನದಲ್ಲಿ ಚುನಾವಣೆಗೆ ನಿಲ್ಲುತ್ತಾರೆಯೇ ಎಂದು ಭಾಸವಾಗುತ್ತಿದೆ ಎಂಬುದಾಗಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಟೀಕಿಸಿದ್ದಾರೆ.

ನೀವು ಪಾಕಿಸ್ತಾನದಿಂದ ಚುನಾವಣೆಗೆ ನಿಲ್ಲಲು ಯತ್ನಿಸುತ್ತಿದ್ದೀರಾ? ದಯವಿಟ್ಟು ಉತ್ತರಿಸಿ. ನಾವು ಬಿಜೆಪಿಯವರು ಇನ್ನು ಮುಂದೆ ರಾಹುಲ್ ಗಾಂಧಿಯನ್ನು ರಾಹುಲ್ ಲಹೋರಿ ಅಂತಲೇ ಕರೆಯುತ್ತೇವೆ. ಶಶಿ ತರೂರ್ ಅವರು ಈಗಾಗಲೇ ರಾಹುಲ್ ಅವರ ಚೊಚ್ಚಲ ಚುನಾವಣಾ ಸಮಾವೇಶವನ್ನು ಮಾಡಿದ್ದಾರೆ ಎಂದು ಸಂಬಿತ್ ಪಾತ್ರ ಕಿಡಿ ಕಾರಿದ್ದಾರೆ.

ಶಶಿ ತರೂರ್ ಅವರು ವರ್ಚುವಲ್ ಆಗಿ ನಡೆದಿದ್ದ ಲಾಹೋರ್ ಸಾಹಿತ್ಯ ಸಮಾವೇಶವೊಂದರಲ್ಲಿ ಮಾತನಾಡುತ್ತಾ, ಕೋವಿಡ್-19 ಮಹಾಮಾರಿಯನ್ನು ಭಾರತವು ನಿರ್ವಹಿಸಿದ ಬಗೆಯನ್ನು ಟೀಕಿಸಿದ್ದರು. ಜೊತೆಗೆ, ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿಯನ್ನೂ ಈಶಾನ್ಯದಲ್ಲಿ ಭಾರತೀಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದೂ ಆರೋಪಿಸಿದ್ದರು ಎಂದು ಹೇಳಲಾಗಿದೆ.

ಇದನ್ನು ಕಟುವಾಗಿ ಟೀಕಿಸಿರುವ ಬಿಜೆಪಿ, ಭಾರತ ರಾಷ್ಟ್ರೀಯ ಕಾಂಗ್ರೆಸ್ ಶೀಘ್ರದಲ್ಲೇ ಪಾಕಿಸ್ತಾನಿ ರಾಷ್ಟ್ರೀಯ ಕಾಂಗ್ರೆಸ್ ಆಗಲಿದೆ ಎಂದಿದೆ. “ಅವರು ಜಿನ್ನಾ ಬೆಂಬಲಿಗರಿಗೆ ಟಿಕೆಟ್ ಕೊಡುತ್ತಾರೆ. ನನ್ನ ಪ್ರಶ್ನೆಯೇನೆಂದರೆ, ನೀವು ಭಾರತದ ಬಗ್ಗೆ ಲಾಹೋರ್‌ನಲ್ಲಿ ಹೋಗಿ ಅಳುವುದೇತಕ್ಕೆ? ರಾಹುಲ್ ಗಾಂಧಿಗೆ ಭಾರತದ ಬಗ್ಗೆ ದ್ವೇಷವಿದೆ ಎಂಬುದರಲ್ಲಿ ನಮಗೆ ಸಂದೇಹವೇ ಉಳಿದಿಲ್ಲ. ಪೂರ್ತಿ ಹೊಣೆಯರಿತೇ ನಾನು ಈ ಮಾತನ್ನು ಹೇಳುತ್ತಿದ್ದೇನೆ” ಎಂದಿದ್ದಾರೆ ಸಂಬಿತ್ ಪಾತ್ರ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

ಗಾಂಧಿ ಕುಟುಂಬದ ಆಪ್ತ ತರೂರ್ ಅವರು ಪಾಕಿಸ್ತಾನಿ ವೇದಿಕೆಯಲ್ಲಿ ಭಾರತ ದೇಶವನ್ನು ಅವಮಾನಿಸಿದ್ದಾರೆ ಎಂದಿರುವ ಅವರು, ಕೋವಿಡ್‌ಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವು ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಇಡೀ ಜಗತ್ತೇ ನೋಡುತ್ತಿದೆ. ಕೊರೊನಾ ವೈರಸ್ ಪೀಡಿತರಲ್ಲಿ ಗರಿಷ್ಠ ಚೇತರಿಕೆ ಪ್ರಮಾಣ ಹಾಗೂ ಕನಿಷ್ಠ ಸಾವಿನ ಪ್ರಮಾಣ ದಾಖಲಿಸಿದ್ದು ಇಡೀ ಜಗತ್ತಿಗೇ ಗೊತ್ತಿರುವ ವಿಷಯ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.

ತಬ್ಲಿಗಿ ಜಮಾತ್ ಬಗ್ಗೆ ಮಾತನಾಡಿದ್ದ ತರೂರ್, ಮಹಾಮಾರಿಯೊಂದರಿಂದ ಉದ್ಭವಿಸಿದ ಪರಿಸ್ಥಿತಿಯನ್ನು ನಾವು ಭಾರತದಲ್ಲಿ ಪೂರ್ವಗ್ರಹದಿಂದ, ಧರ್ಮಾಂಧತೆಯಿಂದ ಎದುರಿಸುತ್ತಿದ್ದೇವೆ ಎಂದಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಸಂಬಿತ್ ಪಾತ್ರ, ಭಾರತದಷ್ಟು ಪ್ರಜಾಪ್ರಭುತ್ವದ ರಾಷ್ಟ್ರ ಇಡೀ ಜಗತ್ತಿನಲ್ಲೇ ಇಲ್ಲ ಎಂದರಲ್ಲದೆ, ಪಾಕಿಸ್ತಾನದಲ್ಲಿ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದುಗಳ ಮೇಲಾಗುತ್ತಿರುವ ಅನ್ಯಾಯ, ದೌರ್ಜನ್ಯವನ್ನೆಂದಿಗಾದರೂ ರಾಹುಲ್, ಸೋನಿಯಾ ಅಥವಾ ಪ್ರಿಯಾಂಕಾ ವಾದ್ರ ಪ್ರಶ್ನಿಸಿದ್ದಾರೆಯೇ ಎಂದು ಕೇಳಿದರು.

ರಾಹುಲ್ ಗಾಂಧಿ ಅವರು ಭಾರತವನ್ನು ಸಿರಿಯಾ, ಪಾಕಿಸ್ತಾನ, ಕೊರಿಯಾ, ಅಫಘಾನಿಸ್ತಾನದೊಂದಿಗೆ ಹೋಲಿಕೆ ಮಾಡ್ತಾರೆ ಎಂದರೆ, ರಾಹುಲ್ ಅವರು ಭಾರತವನ್ನು ದ್ವೇಷಿಸುತ್ತಾರೆ ಎಂದೇ ತಿಳಿದುಕೊಳ್ಳಬೇಕಿದೆ. ಅವರಿಗೆ ಭಾರತ ಇಷ್ಟವಿಲ್ಲ ಎಂದಿದ್ದಾರೆ ಸಂಬಿತ್ ಪಾತ್ರ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಮದರಸಾ ಶಿಕ್ಷಣ ನಿಲ್ಲಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದ್ದೇಕೆ? ಕಾಶ್ಮೀರದಲ್ಲೂ ಹದ್ದಿನ ಕಣ್ಣು
Next post TRP Scam ಸಿಬಿಐಗೆ ವಹಿಸಿದ್ದು ಸುದ್ದಿಯಾಗಲಿಲ್ಲ: ಎಫ್ಐಆರ್‌ನಲ್ಲಿದ್ದುದು ರಿಪಬ್ಲಿಕ್ ಅಲ್ಲ, ಇಂಡಿಯಾ ಟುಡೇ ಹೆಸರು!

ಸುದ್ದಿ ಸಂಚಯ

ಇವುಗಳನ್ನೂ ನೋಡಿ