ನವದೆಹಲಿ: ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಬ್ಬರೂ ಇದೀಗ ವಿದೇಶಕ್ಕೆ ಹಾರಿದ್ದಾರೆ.
ಸೋನಿಯಾ ಗಾಂಧಿಯವರು ನಿಗದಿತ ವೈದ್ಯಕೀಯ ತಪಾಸಣೆ ಮತ್ತು ಫಾಲೋ-ಅಪ್ಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ಕೋವಿಡ್-19 ಮಹಾಮಾರಿಯು ತಂದೊಡ್ಡಿದ ಲಾಕ್ಡೌನ್ನಿಂದಾಗಿ ಈ ತಪಾಸಣೆಯನ್ನು ಮುಂದೂಡಲಾಗಿತ್ತು. ಅವರೊಂದಿಗೆ ರಾಹುಲ್ ಗಾಂಧಿಯೂ ತೆರಳುತ್ತಿದ್ದಾರೆ. ನಿಮ್ಮೆಲ್ಲರ ಕಾಳಜಿ ಮತ್ತು ಶುಭ ಹಾರೈಕೆಗೆ ಧನ್ಯವಾದಗಳು ಎಂದು ಎಐಸಿಸಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ. ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .
ಸೋಮವಾರದಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಪ್ರತಿಪಕ್ಷದ ಪ್ರಮುಖ ಮುಖಂಡರಿಬ್ಬರೂ ಇದರಲ್ಲಿ ಭಾಗವಹಿಸುತ್ತಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ದೇಶದ ರೈತರಿಗೆ ಅನುಕೂಲವಾಗುವಂತೆ ಕೃಷಿ ಮತ್ತು ಆಹಾರಧಾನ್ಯ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೊರಡಿಸಿರುವ ಮೂರು ಪ್ರಮುಖ ಸುಗ್ರೀವಾಜ್ಞೆಗಳನ್ನು ವಿರೋಧಿಸುವ ಕಾರ್ಯಕ್ರಮದಲ್ಲಿ ಈ ನಾಯಕರಿಬ್ಬರೂ ಗೈರುಹಾಜರಾಗುತ್ತಿದ್ದಾರೆ.
ಮೋದಿ ಸರ್ಕಾರವು ಹಸಿರು ಕ್ರಾಂತಿಯ ಮೂಲ ಉದ್ದೇಶವನ್ನೇ ನಿರ್ನಾಮ ಮಾಡಲು ಹೊರಟಿದೆ ಮತ್ತು ರೈತರ ಕತ್ತು ಕುಯ್ಯುತ್ತಿದೆ ಎಂಬುದು ವಿರೋಧ ಪಕ್ಷವಾಗಿರುವ ಕಾಂಗ್ರೆಸ್ನ ಅಭಿಪ್ರಾಯ.

Average Rating