Read Time:5 Minute, 37 Second

ಜನಸಂಖ್ಯೆ ಆಧಾರದಲ್ಲಿ Minority ಸ್ಥಾನಮಾನ ನೀಡಬೇಕೇ?: Supreme Court ಹೇಳಲಿದೆ!

0 0

ನವದೆಹಲಿ: ರಾಜ್ಯ ಮಟ್ಟದಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸುವಲ್ಲಿ ವಿಫಲವಾಗಿರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಆಯೋಗ ಕಾಯ್ದೆ-2004 ಅನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ.

ಭಾರತೀಯ ಸಂವಿಧಾನದ 14, 15, 21, 29 ಹಾಗೂ 30ನೇ ವಿಧಿಗಳಿಗೆ ಪೂರಕವಾಗಿಲ್ಲದ ಹಾಗೂ ಕೇಂದ್ರಕ್ಕೆ ಸ್ವತಂತ್ರ ಅಧಿಕಾರ ನೀಡುವ, ಜೊತೆಗೆ ಟಿಎಂಎ ಪೈ ತೀರ್ಪಿಗೆ ವಿರುದ್ಧವಾಗಿರುವ ಕಾಯ್ದೆಯ ಮಾನ್ಯತೆಯನ್ನು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬವರು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಜಯ್ ರಸ್ತೋಗಿ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠವು ಶುಕ್ರವಾರ (ಆ.28, 2020) ಇದರ ವಿಚಾರಣೆ ಕೈಗೆತ್ತಿಕೊಂಡಿದೆ.

ಈಗಿರುವ 1992ರ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಕಾಯ್ದೆಯ ಸೆಕ್ಷನ್ 2(ಸಿ) ಅನುಸಾರ, ರಾಷ್ಟ್ರೀಯ ಜನಸಂಖ್ಯೆಯ ಆಧಾರದಲ್ಲಿ ಐದು ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ ಹಾಗೂ ಪಾರ್ಸಿಗಳಿಗೆ ಅಲ್ಪಸಂಖ್ಯಾತರು ಎಂಬ ಸ್ಥಾನಮಾನ ನೀಡಿದೆ.

ಇದುವರೆಗೂ ದೇಶದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದಾಗಿ ಭಾರತೀಯ ನೈಜ ಪ್ರತಿಭೆಗಳು ವಿದೇಶದ ಪಾಲಾಗಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಅಲ್ಪಸಂಖ್ಯಾತ ಸಮುದಾಯ ಎಂದು ಸಾರಲು ಕೇಂದ್ರಕ್ಕೆ ಅಧಿಕಾರ ನೀಡುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಾಗಿರುವ ರಾಷ್ಟ್ರೀಯ ಆಯೋಗ ಕಾಯ್ದೆಯ ಸೆಕ್ಷನ್ 2(ಎಫ್) ಅನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy.

ಲಡಾಖ್, ಮಿಜೋರಂ, ಲಕ್ಷದ್ವೀಪ, ಕಾಶ್ಮೀರ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಪಂಜಾಬ್, ಮಣಿಪುರಗಳಲ್ಲಿ ಜುಡಾಯಿಸಂ, ಬಹಾಯಿಸಂ ಮತ್ತು ಹಿಂದೂಯಿಸಂ ಅನುಯಾಯಿಗಳು ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತರು ಆಗಿದ್ದರೂ, “ಅಲ್ಪಸಂಖ್ಯಾತರು” ಅಂತ ಮಾನ್ಯತೆಯಿಲ್ಲದಿರುವುದರಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಅಥವಾ ನಡೆಸುವ ಹಕ್ಕು ಕಳೆದುಕೊಂಡಿದ್ದಾರೆ ಎಂಬುದು ಈ ಅರ್ಜಿಯಲ್ಲಿರುವ ಅಂಶ.

ಜೂಡಾಯಿ, ಬಹಾಯಿ ಮತ್ತು ಹಿಂದುತ್ವದ ಅನುಯಾಯಿಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿಭಾಯಿಸುವ ಮೂಲಭೂತ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಮತ್ತೊಂದೆಡೆ, ಮುಸ್ಲಿಮರು ಲಕ್ಷದ್ವೀಪದಲ್ಲಿ ಹಾಗೂ ಕಾಶ್ಮೀರದಲ್ಲಿ ಬಹುಸಂಖ್ಯಾತರು. ಲಕ್ಷದ್ವೀಪದಲ್ಲಿ ಶೇ.96.58 ಹಾಗೂ ಕಾಶ್ಮೀರದಲ್ಲಿ ಶೇ.96 ಮುಸ್ಲಿಮರಿದ್ದಾರೆ. ಇನ್ನು ಕ್ರಿಶ್ಚಿಯನ್ನರು ನಾಗಾಲ್ಯಾಂಡ್ (ಶೇ.88.10), ಮಿಜೋರಾಂ (ಶೇ.87.16) ಮತ್ತು ಮೇಘಾಲಯಗಳಲ್ಲಿ (ಶೇ.74.59) ಬಹುಸಂಖ್ಯಾತರಾಗಿದ್ದಾರೆ. ಹೀಗಿರುವಾಗ ನ್ಯಾಯ ಬೇಕು ಎಂದು ಕೋರಿ ಈ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.

ರಾಜ್ಯಗಳಲ್ಲಿನ ಜನಸಂಖ್ಯೆಯ ಆಧಾರದಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟು ಕಳೆದ ವರ್ಷ ವಜಾ ಮಾಡಿತ್ತು. “ರಾಜ್ಯಗಳನ್ನು ವಿಂಗಡಿಸಿದ್ದೇ ಭಾಷೆಗಳ ಆಧಾರದಲ್ಲಿ. ಆದರೆ ಧರ್ಮದ ವಿಷಯದಲ್ಲಿ ಹಾಗಿಲ್ಲ. ಒಂದು ಸಮುದಾಯವು ಜಮ್ಮು ಮತ್ತು ಕಾಶ್ಮೀರದಲ್ಲಿ ಬಹುಸಂಖ್ಯಾತವಾಗಿದ್ದು, ಬೇರೆಲ್ಲ ರಾಜ್ಯಗಳಲ್ಲಿ ಅಲ್ಪಸಂಖ್ಯಾತವಾಗಿದ್ದರೆ ಏನು ಸಮಸ್ಯೆ? ಲಕ್ಷದ್ವೀಪದಲ್ಲಿ ಹಿಂದುಗಳು ಶೇ.2ರಷ್ಟೇ ಇರಬಹುದು, ಆದರೆ ಅವರು ಭಾರತದ ಬಹುಸಂಖ್ಯಾತ ಸಮುದಾಯವಾಗಿರುವ ಹಿಂದುತ್ವವನ್ನೇ ಅನುಸರಿಸುತ್ತಿದ್ದಾರೆ” ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಹೀಗಿರುವಾಗ ಸಮಸ್ಯೆಯೇನೆಂದರೆ, ಜಿಲ್ಲಾ ಮಟ್ಟದಲ್ಲಿ ಕೂಡ ಅಲ್ಪಸಂಖ್ಯಾತ-ಬಹುಸಂಖ್ಯಾತ ಜನಸಂಖ್ಯೆಯಲ್ಲಿ ವ್ಯತ್ಯಾಸವಿರುತ್ತದೆ. ಅಲ್ಪಸಂಖ್ಯಾತ ಸಮುದಾಯವೊಂದು ಬಹುಸಂಖ್ಯಾತವಾಗಿ ಇಲ್ಲದಿರುವ ರಾಜ್ಯವೊಂದರಲ್ಲಿ ಕೂಡ, ಕೆಲವೆಡೆ ಅದು ಮೇಲುಗೈ ಸಾಧಿಸಿರಬಹುದು. ಉದಾಹರಣೆಗೆ, ಮಣಿಪುರದ ನಾಲ್ಕು ಜಿಲ್ಲೆಗಳಲ್ಲಿ ಕ್ರಿಶ್ಚಿಯನ್ನರು ಬಹುಸಂಖ್ಯೆಯಲ್ಲಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಶೇ.70 ಮಂದಿಯೂ ಮುಸ್ಲಿಮರು. ಸಿಕ್ಕಿಂನ ಉತ್ತರ ಜಿಲ್ಲೆ ಹಾಗೂ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಬೌದ್ಧರು ಬಹುಸಂಖ್ಯಾತರು. ಹೀಗಿರುವಾಗ, ಯಾವ ಮಟ್ಟದವರೆಗೆ ನಾವು ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರು ಅಂತ ಗುರುತಿಸಿಕೊಳ್ಳಬಹುದು. ಇದು ಪ್ರಶ್ನೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯೋಣ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಪತ್ರ ಬರೆದವರಿಗೆ ಸ್ಪಷ್ಟ ಸಂದೇಶ: ಯುವ ನಾಯಕರಿಗೆ ಮಣೆ ಹಾಕಿದ ಕಾಂಗ್ರೆಸ್
Next post Congress Letter Bomb: ಕಾಂಗ್ರೆಸ್‌ಗೆ ಪತ್ರ ಬರೆದ 23 ನಾಯಕರು ಯಾರು? ಅಂಥದ್ದೇನಿತ್ತು?: ಇಲ್ಲಿದೆ ಡೀಟೇಲ್ಸ್

ಸುದ್ದಿ ಸಂಚಯ

ಇವುಗಳನ್ನೂ ನೋಡಿ