Read Time:3 Minute, 47 Second

ಮಾಧ್ಯಮಗಳಿಗೆ ಶುಲ್ಕ: ಆಸ್ಟ್ರೇಲಿಯನ್ನರಿಗೆ ಬಹಿರಂಗ ಪತ್ರ ಸಹಿತ ಎಚ್ಚರಿಸಿದ Google

0 0

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಸುದ್ದಿ ಹಾಗೂ ಲೇಖನಗಳಿಗಾಗಿ ಮಾಧ್ಯಮ ಸಂಸ್ಥೆಗಳಿಗೆ ಫೇಸ್‌ಬುಕ್ ಹಾಗೂ ಗೂಗಲ್ ಕಂಪನಿಗಳು ಹಣ ನೀಡಬೇಕು ಎಂದು ಕಳೆದ ತಿಂಗಳು ಅಲ್ಲಿನ ಸರ್ಕಾರ ಸೂಚಿಸಿತ್ತು. ಇದೀಗ ಗೂಗಲ್ ಈ ಆದೇಶದ ವಿರುದ್ಧ ಧ್ವನಿಯೆತ್ತಿದ್ದು, ಆಸ್ಟ್ರೇಲಿಯಾ ನಾಗರಿಕರ ಮೊರೆ ಹೋಗಿದೆ.

ಹೊಸದಾಗಿ ಜಾರಿಗೆ ಬರಲಿರುವ ಕಾಯ್ದೆಯಾಗಿರುವ ಸುದ್ದಿ ಮಾಧ್ಯಮಗಳ ವ್ಯವಹಾರ ಸಂಹಿತೆ (NMBC) ಅನುಸಾರ, ನೀವು ಬಳಸುತ್ತಿರುವ ಉಚಿತ ಸೇವೆಗಳಿಗೆ ಧಕ್ಕೆಯಾಗುತ್ತದೆ ಎಂದು ಗೂಗಲ್ ಆಸ್ಟ್ರೇಲಿಯನ್ನರಿಗೆ ಬಹಿರಂಗ ಪತ್ರ ಬರೆದಿದೆ.

ಗೂಗಲ್ ಹಾಗೂ ಯೂಟ್ಯೂಬ್‌ನಲ್ಲಿ ಬರುವ ಸರ್ಚ್ ಫಲಿತಾಂಶಗಳು ಸುದ್ದಿ ಮಾಧ್ಯಮ ಸಂಸ್ಥೆಗಳ ಪಕ್ಷಪಾತಿಯಾಗಿರಬಹುದು ಎಂಬುದರ ಬಗ್ಗೆ ಈ ಕರಡು ನೀತಿಯಡಿ ಖಾತ್ರಿ ಇಲ್ಲ ಎಂದು ಗೂಗಲ್ ಹೇಳಿರುವುದಷ್ಟೇ ಅಲ್ಲದೆ, ಹೊಸ ಕಾನೂನಿನಡಿ ನಿಮ್ಮ ಸರ್ಚ್ ದತ್ತಾಂಶದ ಸುರಕ್ಷತೆಗೂ ಖಾತ್ರಿ ಇಲ್ಲ ಎಂದೂ ಹೇಳಿದೆ.

ಹೊಸ ಪ್ರಸ್ತಾಪಿತ ಕಾಯ್ದೆಯ ಪ್ರಕಾರ, ಬಳಕೆದಾರರ ದತ್ತಾಂಶಕ್ಕೆ ಹೇಗೆ ಆ್ಯಕ್ಸೆಸ್ (ಪ್ರವೇಶಾವಕಾಶ) ಪಡೆಯುತ್ತದೆ ಎಂಬುದನ್ನು ಗೂಗಲ್ ಕಂಪನಿಯು ಸುದ್ದಿ ಮಾಧ್ಯಮ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಕು. ಆದರೆ ಈ ರೀತಿ ಹಸ್ತಾಂತರಿಸಿದ ದತ್ತಾಂಶವನ್ನು ಹೇಗೆ ರಕ್ಷಿಸಲಾಗುತ್ತದೆ ಅಥವಾ ಅವುಗಳನ್ನು ಸುದ್ದಿ ಮಾಧ್ಯಮ ಸಂಸ್ಥೆಗಳು ಹೇಗೆ ಬಳಸಿಕೊಳ್ಳುತ್ತವೆ ಎಂಬುದೂ ತಿಳಿಯಲಾರದು ಎಂದು ಹೇಳಿದೆ.

ಆದರೆ, ಗೂಗಲ್‌ನ ಈ ಬಹಿರಂಗ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಸ್ಫರ್ಧಾತ್ಮಕತೆ ಮತ್ತು ಗ್ರಾಹಕ ಆಯೋಗ (ಎಸಿಸಿಸಿ), ಇದು ಅಪಪ್ರಚಾರ ಎಂದು ಹೇಳಿದೆ

ಅಗತ್ಯವಿಲ್ಲದೆ, ಗೂಗಲ್ ಸರ್ಚ್ ಮತ್ತು ಯೂಟ್ಯೂಬ್‌ನ ಉಚಿತ ಸೇವೆಗಳಿಗಾಗಿ ಆಸ್ಟ್ರೇಲಿಯನ್ನರಿಗೆ ಗೂಗಲ್ ಶುಲ್ಕ ವಿಧಿಸಬೇಕಿಲ್ಲ. ಅಷ್ಟೇ ಅಲ್ಲದೆ, ಅಗತ್ಯವಿಲ್ಲದೆ, ಆಸ್ಟ್ರೇಲಿಯನ್ ಸುದ್ದಿ ಸಂಸ್ಥೆಗಳೊಂದಿಗೆ ಅದು ಬಳಕೆದಾರರ ಯಾವುದೇ ಹೆಚ್ಚುವರಿ ದತ್ತಾಂಶವನ್ನು ಹಂಚಿಕೊಳ್ಳುವ ಅಗತ್ಯವೂ ಇಲ್ಲ ಎಂದು ಎಸಿಸಿಸಿ ಮುಖ್ಯಸ್ಥ ರಾಡ್ ಸಿಮ್ಸ್ ಹೇಳಿದ್ದಾರೆ.

ಜಗತ್ತಿನಾದ್ಯಂತದ ವೆಬ್ ತಾಣಗಳಿಂದ ಗೂಗಲ್ ಎಂಬ ಸರ್ಚ್ ಎಂಜಿನ್ ಎಲ್ಲ ರೀತಿಯ ಸುದ್ದಿ, ಮಾಹಿತಿಯನ್ನು ಹುಡುಕಿ, ಬಳಕೆದಾರರಿಗೆ ಉಚಿತವಾಗಿ ಒದಗಿಸುತ್ತದೆ. ಈ ಹಂತದಲ್ಲಿ ಆಸ್ಟ್ರೇಲಿಯಾದಲ್ಲಿನ ಹೊಸ ಪ್ರಸ್ತಾಪಿತ ಕಾನೂನು ಪ್ರಕಾರ, ಈ ರೀತಿಯಾಗಿ ಸುದ್ದಿ ಮಾಧ್ಯಮ ಸಂಸ್ಥೆಗಳ ಲೇಖನ ಇತರ ಕಂಟೆಂಟ್ ಅನ್ನು ಗೂಗಲ್ ತನ್ನ ಬಳಕೆದಾರರಿಗೆ ಒದಗಿಸಬೇಕಿದ್ದರೆ, ಮಾಧ್ಯಮ ಸಂಸ್ಥೆಗಳಿಗೇ ಶುಲ್ಕ ನೀಡಬೇಕು. ಸುದ್ದಿ ಸಂಸ್ಥೆಗಳಿಗೆ ಈಗಾಗಲೇ ಲಕ್ಷಾಂತರ ಡಾಲರ್ ಹಣ ನೀಡುತ್ತಿರುವುದಾಗಿಯೂ, ಈ ಆನ್‌ಲೈನ್ ಕಂಟೆಂಟ್‌ನ ಪರವಾನಗಿಗಾಗಿ ಮತ್ತಷ್ಟು ಹಣ ನೀಡಲು ಸಿದ್ಧ ಎಂದೂ ಗೂಗಲ್‌ನ ಆಸ್ಟ್ರೇಲಿಯಾ ವ್ಯವಸ್ಥಾಪನಾ ನಿರ್ದೇಶಕ ಮೆಲ್ ಸಿಲ್ವಾ ಈಗಾಗಲೇ ಘೋಷಿಸಿದ್ದಾರೆ. ಈ ಕುರಿತು ಸಾರ್ವಜನಿಕರ ಪ್ರತಿಕ್ರಿಯೆಯನ್ನೂ ಅಲ್ಲಿನ ಸರ್ಕಾರ ಕೇಳಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Congress ನಾಯಕತ್ವ ಬದಲಿಸಲು 100ರಷ್ಟು ಕಾಂಗ್ರೆಸಿಗರು ಪತ್ರ ಬರೆದಿದ್ದು ಹೌದೇ?
Next post Sushant ನಿಗೂಢ ಸಾವು ಸಿಬಿಐಗೆ: Supreme Court ಅಧಿಕೃತ ಮುದ್ರೆ

ಸುದ್ದಿ ಸಂಚಯ

ಇವುಗಳನ್ನೂ ನೋಡಿ