Oath Pro (ಓತ್ ಪ್ರೋ) ಸರಣಿಯಲ್ಲಿ ಪ್ರೀಮಿಯಂ ಬೆಜೆಲ್-ರಹಿತ ಟಿವಿಗಳನ್ನು ಬಿಡುಗಡೆ ಮಾಡಿರುವ ಥಾಮ್ಸನ್ ಇಂಡಿಯಾ, ಇದೀಗ 75 ಇಂಚಿನ ಐಷಾರಾಮಿ ಟಿವಿಯನ್ನೂ ಬಿಡುಗಡೆ ಮಾಡಿದೆ.
10,999 ರೂ.ಗಳಿಂದ ಆರಂಭವಾಗಿರುವ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಗಳಲ್ಲಿ ಓತ್ ಪ್ರೋ ಸರಣಿಯ 75 ಇಂಚು ಟಿವಿ ಬೆಲೆ 99,999 ರೂ. ಆಗಿದೆ. 50 ಇಂಚಿನ ಟಿವಿ ಬೆಲೆ 28,999 ರೂ. ಆಗಿದೆ.
ಎಲ್ಲ ಟಿವಿಗಳು ಆಗಸ್ಟ್ 6ರಿಂದ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ತಾಣದಲ್ಲಿ ಖರೀದಿಗೆ ಲಭ್ಯ ಇವೆ.
32 ಇಂಚಿನ ಪಾತ್ (PATH) ಸರಣಿಯ ಟಿವಿಯ ಬೆಲೆ 10,999 ರೂ. ಆಗಿದ್ದು, 40, 43, 50, 55 ಇಂಚುಗಳಲ್ಲಿ ಕೂಡ ಲಭ್ಯ ಇವೆ. ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುವ ಈ ಸಂದರ್ಭದಲ್ಲಿ ಮನೆಯಿಂದಲೇ ಕಲಿಕೆಗೂ ಈ ಆಂಡ್ರಾಯ್ಡ್ ಟಿವಿಗಳು ಅನುಕೂಲಕರವಾಗಿವೆ. ಆನ್‌ಲೈನ್ ತರಗತಿಗಳನ್ನೂ ಟಿವಿಯ ಮೂಲಕವೇ ನೋಡಬಹುದಾಗಿದ್ದು, ಗೂಗಲ್ ಅಸಿಸ್ಟೆಂಟ್ ಬೆಂಬಲವಿದೆ.
| Series | Model | Price | Series | Model | Price | |
| 9A | 32 HD PATH | ₹ 10,999 | 9R | 43 4k PATH | ₹ 21,999 | |
| 9A | 32 Bazel less | ₹ 11,499 | 9R | 50 4K PATH | ₹ 25,999 | |
| 9A | 40 FHD PATH | ₹ 16,499 | 9R | 55 4k PATH | ₹ 29,999 | |
| 9A | 43 FHD PATH | ₹ 19,999 | OATH PRO | 50 OATH PRO | ₹ 28,999 | |
| OATH PRO | 75 OATH PRO | ₹ 99,999 |
ಮನೋರಂಜನೆಗೂ ಬಹುತೇಕ ಎಲ್ಲ ಒಟಿಟಿಗಳ ಆ್ಯಪ್‌ಗಳು ಟಿವಿಯಲ್ಲಿ ಅಡಕವಾಗಿದ್ದು, ಲೈವ್ ಸ್ಟ್ರೀಮಿಂಗ್ ವಿಡಿಯೊಗಳನ್ನೂ ವೀಕ್ಷಿಸಬಹುದಾಗಿದೆ. ಸ್ನೇಹಮಯಿ ತಂತ್ರಜ್ಞಾನವು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಿರುವುದು ಯೂರೋಪ್‌ನ ಪ್ರಮುಖ ಟಿವಿ ತಯಾರಿಕಾ ಸಂಸ್ಥೆ ಥಾಮ್ಸನ್‌ನ ಹೆಗ್ಗಳಿಕೆ.
ಮೇಕ್ ಇನ್ ಇಂಡಿಯಾ ಘೋಷಣೆಯಡಿ, ‘ಆತ್ಮ ನಿರ್ಭರ ಭಾರತ’ ಸಿದ್ಧಾಂತಕ್ಕೂ ಪೂರಕವಾಗಿರುವ ಕಂಪನಿಯು ಬೆಂಗಳೂರಿನಲ್ಲಿರುವ ತನ್ನ R&D ಕೇಂದ್ರದಲ್ಲಿ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಭಾರತದಲ್ಲಿ ಥಾಮ್ಸನ್ ಬ್ರ್ಯಾಂಡ್ ಪರವಾನಗಿದಾರ ಕಂಪನಿ ಸೂಪರ್ ಪ್ಲಾಸ್ಟ್ರಾನಿಕ್ಸ್ ಪ್ರೈ.ಲಿ (SPPL) ಗೂಗಲ್ ಜೊತೆಗಿನ ಪಾಲುದಾರಿಕೆಯೊಂದಿಗೆ, ಟಿವಿಗಳನ್ನು ಹೊರತಂದಿದೆ.
Path 9A ಹಾಗೂ Path 9R ಸರಣಿಗಳ ಎಲ್ಲ ಟಿವಿಗಳು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದ್ದು, ಪರೀಕ್ಷೆಗೊಳಪಟ್ಟಿವೆ ಎಂದು ಎಸ್‌ಪಿಪಿಎಲ್ ಸಿಇಒ ಅವನೀತ್ ಸಿಂಗ್ ಮರ್ವಾ ಹೇಳಿದ್ದಾರೆ.

Average Rating